ಚೆನ್ನೈ(ತಮಿಳುನಾಡು): ಶಿಕ್ಷಣ ಸಂಸ್ಥೆಗಳು ದೇಶದ ಶ್ರೀಮಂತ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಸಮಯ ಬಂದಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ನ್ಯಾಷನಲ್ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ ಅವರು, ನಮ್ಮ ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ ಅಧ್ಯಯನ ವಿಭಾಗಗಳ ದಿಣ್ಣೆಗಳನ್ನು ಮುರಿಯುವ ಸಮಯ ಇದಾಗಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಸಾಮಾಜ ವಿಜ್ಞಾನವನ್ನೂ ಕಲಿಯಲು ಪ್ರೋತ್ಸಾಹ ನೀಡಬೇಕು. ಜೊತೆಗೆ ಸಾಮಾಜಿಕ ಅಧ್ಯಯನದಲ್ಲಿನ ವೈಜ್ಞಾನಿಕ ಪ್ರಗತಿಯ ತಿಳುವಳಿಕೆಯನ್ನು ಉತ್ತೇಜಿಸಬೇಕು ಎಂದರು.
ಯಾವುದೇ ವಿಷಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಾದರೂ ಸರಿ ಅವರಿಗೆ ಭಾರತದ ಶ್ರೀಮಂತ ಇತಿಹಾಸ ಮತ್ತು ಈ ಮಹಾನ್ ರಾಷ್ಟ್ರಕ್ಕೆ ಆಕಾರ, ರೂಪವನ್ನು ನೀಡಿದ ಮಹಾನ್ ಪುರುಷರು ಮತ್ತು ಮಹಿಳೆಯರ ಜೀವನ ಕಥೆಗಳನ್ನು ಬೋಧನೆ ಮಾಡಬೇಕಿದೆ ಎಂದರು.
ಭಾರತದ ಪ್ರಾಚೀನ ಕಾಲದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳ ಬೌದ್ಧಿಕ, ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಮಾನ ಒತ್ತು ನೀಡಲಾಗುತ್ತಿತ್ತು ಎಂದು ನಾಯ್ಡು ಹೇಳಿದರು.
ನ್ಯಾಷನಲ್ ಕಾಲೇಜಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಉಪರಾಷ್ಟ್ರಪತಿ, ತಿರುಚಿರಾಪಳ್ಳಿಯ ಮೂವರು ಬದ್ಧ ಶಿಕ್ಷಕರಾದ ಜಿ. ಶೇಷಾ ಅಯ್ಯಂಗಾರ್, ಪಿ.ಜಿ.ಯ ಸುಂದರಸ ಶಾಸ್ತ್ರಿಗಲ್ ಮತ್ತು ಬಿ.ಎಸ್. ವೆಂಕಟರಮಣ ಶರ್ಮಾ ಅವರ ರಾಷ್ಟ್ರೀಯತಾವಾದಿ ತತ್ವಶಾಸ್ತ್ರವೇ 1886ರ ಜೂನ್ ತಿಂಗಳಲ್ಲಿ ಶಾಲೆ ಸ್ಥಾಪಿಸಲು ಕಾರಣವಾಯಿತು ಎಂದರು.