ETV Bharat / bharat

ಆತ್ಮಹತ್ಯೆಗೆ ಯತ್ನಿಸಿದ್ದ ತಿಹಾರ್ ಜೈಲಿನ ಕೈದಿ ಆಸ್ಪತ್ರೆಯಲ್ಲಿ ಸಾವು - crime news

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಕೈದಿ ನಿನ್ನೆ ಸಾವನ್ನಪ್ಪಿದ್ದಾನೆ.

ಕೈದಿ ಆಸ್ಪತ್ರೆಯಲ್ಲಿ ಸಾವು, Tihar jail inmate, who tried to commit suicide, dies in hospital
ಕೈದಿ ಆಸ್ಪತ್ರೆಯಲ್ಲಿ ಸಾವು
author img

By

Published : Feb 1, 2020, 8:51 AM IST

ನವದೆಹಲಿ: ತಿಹಾರ್ ಜೈಲಿನೊಳಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ 25 ವರ್ಷದ ಕೈದಿ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ರಾಜೇಶ್ ಸಾವಿಗೀಡಾದ ಕೈದಿ. ಪೋಸ್ಕೋ ಕಾಯ್ದೆಯ (ಲೈಂಗಿಕ ದೌರ್ಜನ್ಯ) ಪ್ರಕರಣದಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಗಿತ್ತು. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಈತ ಯತ್ನಿಸಿದ್ದ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇಣು ಬಿಗಿದುಕೊಂಡ ವಿಚಾರ ಗೊತ್ತಾದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ವಾರ್ಡನ್ ಹಾಗೂ ಇತರೆ ಕೈದಿಗಳು ಈತನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ 11.45 ರ ಸುಮಾರಿಗೆ ಮೃತಪಟ್ಟಿದ್ದಾನೆ.

2013 ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧ ಹಿನ್ನೆಲೆ ಜೈಲು ಸೇರಿದ್ದ ಆರೋಪಿಗಳಲ್ಲೊಬ್ಬನಾದ ರಾಮ್ ಸಿಂಗ್​ ಕೂಡ ಇದೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.