ಕೊಚ್ಚಿ(ಕೇರಳ): ಸೋಮವಾರ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಸಬ್ ಲೆಫ್ಟಿನೆಂಟ್ ಶಿವಾಂಗಿ ನೇಮಕವಾಗಿದ್ದಾರೆ.
ಶಿವಾಂಗಿಯವರು ಜನಿಸಿದ್ದು ಬಿಹಾರದ ಮುಜಫರ್ ಪುರ್ ನಗರದಲ್ಲಿ. ಆರಂಭಿಕ ತರಬೇತಿಯ ನಂತರ ಕಳೆದ ವರ್ಷ ಅವರನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿತ್ತು.
ಇಂದು ಶಿವಾಂಗಿ ಕೊಚ್ಚಿಯ ನೌಕಾ ನೆಲೆಯಲ್ಲಿ ಕಾರ್ಯಾಚರಣೆ ನಡೆಸುವ ಕರ್ತವ್ಯಕ್ಕೆ ಸೇರಿಕೊಂಡಿದ್ದು, ಅವರು ಭಾರತೀಯ ನೌಕಾಪಡೆಯ ಡಾರ್ನಿಯರ್ ಕಣ್ಗಾವಲು ವಿಮಾನವನ್ನು ಹಾರಿಸಲಿದ್ದಾರೆ.