ಮಲಪ್ಪುರಂ(ಕೇರಳ): ದೇಶದೆಲ್ಲೆಡೆ ಹೊತ್ತಿಕೊಂಡ ಪೌರತ್ವ ಕಿಚ್ಚು ಇನ್ನೂ ಆರಿಲ್ಲ. ಎಲ್ಲಿಯವರೆಗೂ ಅಂದರೆ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಮೈದಾನದಲ್ಲೂ ಪ್ರೇಕ್ಷಕರು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಕ್ಲಬ್ ಮಿಲಾಷ್ ಫುಟ್ಬಾಲ್ ಪಂದ್ಯದ ಫೈನಲ್ ಪಂದ್ಯದ ವೇಳೆ ನೆರೆದಿದ್ದ ಪ್ರೇಕ್ಷಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪ್ರೇಕ್ಷಕರು ಆಜಾದಿ ಘೋಷಣೆಗಳನ್ನು ಕೂಗುವ ಮೂಲಕ ಪೌರತ್ವ ಕಾಯ್ದೆಯನ್ನು ವಿರೋಧಿಸಿದರು.
ಪಂದ್ಯವು ತ್ರಿವರ್ಣದ ಬೆಲೂನ್ಗಳನ್ನು ಹಾರಿಸುವ ಮೂಲಕ ಆರಂಭಗೊಂಡಿತು. ಬಳಿಕ ಅಜಾದಿ ಘೋಷಣೆಗಳನ್ನು ಕೂಗಿ ಪೌರತ್ವ ಕಾಯ್ದೆ ವಿರುದ್ಧ ಧ್ವನಿ ಎತ್ತಲಾಯ್ತು. ಪಂದ್ಯ ನಡೆಯುತ್ತಿದ್ದ ವೇಳೆಯೂ ಸ್ಟೇಡಿಯಂ ತುಂಬೆಲ್ಲಾ ಘೋಷಣೆಗಳದ್ದೇ ಸದ್ದು ಕೇಳಿಬಂತು.