ETV Bharat / bharat

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಉಲ್ಬಣ: ಸೋನಿಯಾ ನಿವಾಸದ ಬಳಿ ನೀರವ ಮೌನ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್​​ ಸರ್ಕಾರವನ್ನು ಉರುಳಿಸಲು ಬಿಜೆಪಿ ತಂತ್ರ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸದಲ್ಲಿ ಮೌನ ಆವರಿಸಿತ್ತು. ಪಕ್ಷದ ಯಾವುದೇ ಹಿರಿಯ ನಾಯಕರು ಈ ಬಗ್ಗೆ ಚರ್ಚಿಸಲು ಅಲ್ಲಿಗೆ ಬಂದಿರಲಿಲ್ಲ.

ಸೋನಿಯಾ ಮನೆಯ ಬಳಿ ನೀರಸ ಮೌನ
ಸೋನಿಯಾ ಮನೆಯ ಬಳಿ ನೀರಸ ಮೌನ
author img

By

Published : Jul 12, 2020, 7:02 PM IST

ನವದೆಹಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದ್ದರೂ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸ ಜನಪಥದಲ್ಲಿ ಭಾನುವಾರ ಮೌನ ಆವರಿಸಿತ್ತು. ಈ ಬಗ್ಗೆ ಚರ್ಚಿಸಲು ಯಾವುದೇ ಹಿರಿಯ ಕಾಂಗ್ರೆಸ್ ಮುಖಂಡರು ಅಲ್ಲಿಗೆ ಆಗಮಿಸಿರಲಿಲ್ಲ.

ಪಕ್ಷದ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಶನಿವಾರ ಸಂಜೆ ದೆಹಲಿಗೆ ಆಗಮಿಸಿ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಲು ಕೋರಿದ್ದರು. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್​ ಪೈಲಟ್​​ ಅವರೊಂದಿಗಿನ ಬಿರುಕಿನಿಂದಾಗಿ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.

ಪೈಲಟ್‌ನ ಕಡೆಯವರು ಎಂದು ಹೇಳಲಾದ ಕನಿಷ್ಠ 25 ಶಾಸಕರು ಎನ್‌ಸಿಆರ್-ದೆಹಲಿ ಪ್ರದೇಶದಲ್ಲಿ ವಿವಿಧ ಸ್ಥಳಗಳಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಅಶೋಕ್ ಗೆಹ್ಲೋಟ್​ ತಮಗೆ 103 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದ ಎರಡೂ ಗುಂಪಿನವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ರಾಜಕೀಯ ಗಲಾಟೆಯ ಮಧ್ಯೆ, ರಾಜಸ್ಥಾನದ ಸುಮಾರು 12 ಶಾಸಕರು ಗುರುಗ್ರಾಮ್​ನ ಮಾನೇಸರ್ ಬಳಿ ಇರುವ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್​ಗೆ ಶನಿವಾರ ಸಂಜೆ ಧಾವಿಸಿದ್ದರು.

ಬಿಜೆಪಿ ತನ್ನ ಶಾಸಕರಿಗೆ ಆಮಿಷವೊಡ್ಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಅವರನ್ನು ಬೇಟೆಯಾಡಲು ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.