ETV Bharat / bharat

ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಶಾಸಕರಿಗೆ ಗೆಹ್ಲೋಟ್​ ಕರೆ: ಬಹುಮತ ತೋರಿಸುವ ’’ವಿಶ್ವಾಸ’’ - ಅವಿನಾಶ್ ಪಾಂಡೆ

ಸಚಿನ್ ಪೈಲಟ್ ಮತ್ತು ಅವರಿಗೆ ನಿಷ್ಠರಾಗಿರುವ ಶಾಸಕರು ಬಂಡಾಯ ಎದ್ದ ಬಳಿಕ ರಾಜಸ್ಥಾನ ರಾಜಕೀಯ ಅನಿಶ್ಚಿತತೆಯಡೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಬಹುಮತ ಸಾಬೀತು ಪಡಿಸಲು ಇದೇ ಆಗಸ್ಟ್​ 14ರಿಂದ ವಿಧಾನಸಭೆ ಅಧಿವೇಶನ ಕರೆದಿದೆ. ಅಧಿವೇಶನದಲ್ಲಿ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಮನವಿ ಮಾಡಿದ್ದಾರೆ.

ಶಾಸಕರಿಗೆ ಗೆಹ್ಲೋಟ್​ ಮನವಿ
ಶಾಸಕರಿಗೆ ಗೆಹ್ಲೋಟ್​ ಮನವಿ
author img

By

Published : Aug 10, 2020, 7:50 AM IST

ಜೈಪುರ (ರಾಜಸ್ಥಾನ): ವಿಧಾನಸಭೆ ಅಧಿವೇಶನದಲ್ಲಿ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಮನವಿ ಮಾಡಿದ್ದಾರೆ.

ಜೈಸಲ್ಮೇರ್‌ನ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ನಾವೆಲ್ಲರೂ ಪ್ರಜಾಪ್ರಭುತ್ವದ ಯೋಧರು. ನಾವು ಈ ಯುದ್ಧವನ್ನು ಗೆಲ್ಲಲಿದ್ದೇವೆ ಮತ್ತು ಮೂರೂವರೆ ವರ್ಷಗಳ ನಂತರ ನಡೆಯುವ ಚುನಾವಣೆಯನ್ನೂ ಗೆಲ್ಲುತ್ತೇವೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನೀವು ಇಲ್ಲಿಯವರೆಗೆ ತೋರಿಸಿದ ಒಗ್ಗಟ್ಟನ್ನೇ ಸದನದಲ್ಲೂ ತೋರಿಸಬೇಕಾಗುತ್ತದೆ ಎಂದು ಶಾಸಕರನ್ನ ಸಿಎಂ ಗೆಹ್ಲೋಟ್​ ಕೇಳಿಕೊಂಡರು.

ಸಚಿನ್ ಪೈಲಟ್ ಮತ್ತು ಅವರಿಗೆ ನಿಷ್ಠರಾಗಿರುವ ಶಾಸಕರು ಬಂಡಾಯ ಎದ್ದ ಬಳಿಕ ರಾಜಸ್ಥಾನ ರಾಜಕೀಯ ಅನಿಶ್ಚಿತತೆಯಡೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಬಹುಮತ ಸಾಬೀತು ಪಡಿಸಲು ಇದೇ ಆಗಸ್ಟ್​ 14ರಿಂದ ವಿಧಾನಸಭೆ ಅಧಿವೇಶನ ಕರೆದಿದೆ. ಅಧಿವೇಶನದಲ್ಲಿ ಗೆಹ್ಲೋಟ್ ವಿಶ್ವಾಸಾರ್ಹ ಮತಯಾಚಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಜಯ್ ಮಕೇನ್​, ರಂದೀಪ್ ಸುರ್ಜೆವಾಲಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಉಪಸ್ಥಿತರಿದ್ದರು.

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾತನಾಡಿ, ರಾಜ್ಯದ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನಲ್ಲಿ ಪಕ್ಷವನ್ನು ಬೆಂಬಲಿಸುತ್ತಿರುವ ಇತರ ಪಕ್ಷಗಳ ಶಾಸಕರಿಗೆ ಅವರು ಧನ್ಯವಾದ ಅರ್ಪಿಸಿದರು. ಪೈಲಟ್ ಮತ್ತು 18 ಶಾಸಕರು ಬಂಡಾಯ ಎದ್ದ ಬಳಿಕ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದ್ದು, ತಮ್ಮ ಶಾಸಕರನ್ನ ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನ ರೆಸಾರ್ಟ್​​​ನಲ್ಲಿ ಇರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.