ETV Bharat / bharat

ರಾಮ ಮಂದಿರಕ್ಕಾಗಿ 1 ಕೋಟಿ ರೂ. ದೇಣಿಗೆ... ಬಾಳಾಸಾಹೇಬ್​​ ವಾಗ್ದಾನ ಉಳಿಸಿಕೊಂಡಿದ್ದೇವೆಂದ ಶಿವಸೇನೆ!

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ಎಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದ್ದು, ಇದೀಗ ಶಿವಸೇನೆ ಕೂಡ ಅದರಲ್ಲಿ ಕೈಜೋಡಿಸಿದೆ.

Shiv Sena
Shiv Sena
author img

By

Published : Aug 3, 2020, 3:42 PM IST

Updated : Aug 3, 2020, 4:17 PM IST

ಮುಂಬೈ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮ ಆಗಸ್ಟ್​ 5ರಂದು ನಡೆಯಲಿದ್ದು, ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಶಿಲಾನ್ಯಾಸ ನಡೆಸಲಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ವಿವಿಧ ಮೂಲೆಗಳಿಂದ ದೇಣಿಗೆ ಸಂಗ್ರಹವಾಗುತ್ತಿದ್ದು, ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಕೂಡ 1 ಕೋಟಿ ರೂ ದೇಣಿಗೆ ನೀಡಿದ್ದಾರೆ. ಶಿವಸೇನೆ ಪಕ್ಷದ ವತಿಯಿಂದ 1 ಕೋಟಿ ರೂ. ಹಣ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡುತ್ತಿರುವುದಾಗಿ ಅವರು ಹೇಳಿ ಟ್ವೀಟ್​ ಮಾಡಿದ್ದಾರೆ.

  • शिवसेना पक्ष प्रमुख उद्धव बालासाहेब ठाकरे ने अयोध्या यात्रा के दौरान शिवसेना पार्टी की ओर से राममंदिर निर्माण मे १ करोड़ रुपए का योगदान देने का संकल्प किया था। यह १ करोड़ की संकल्प राशि श्री राम जन्मभूमि तीर्थक्षेत्र ट्रस्ट में २७ जुलाई को RTGS कर दी गई है। pic.twitter.com/ubiiBkdV6r

    — Office of Uddhav Thackeray (@OfficeofUT) August 3, 2020 " class="align-text-top noRightClick twitterSection" data=" ">

ರಾಮಜನ್ಮ ಭೂಮಿ ನ್ಯಾಯಾಸ್​ಗೆ ಬರೆದ ಪತ್ರ ಪೋಸ್ಟ್ ಮಾಡಿರುವ ಠಾಕ್ರೆ, ತಮ್ಮ ತಂದೆ ಬಾಳಾಸಾಹೇಬ್​ ಅವರ ಕರೆಯ ಮೇರೆಗೆ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸುವ ಆಂದೋಲನದಲ್ಲಿ ಸಾವಿರಾರು ಶಿವ ಸೈನಿಕರು ಭಾಗಿಯಾಗಿದ್ದರು. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್​​ ಠಾಕ್ರೆ ಅವರು ದೇವಾಲಯ ನಿರ್ಮಾಣಕ್ಕಾಗಿ 1 ಕೋಟಿ ರೂ ಹಣ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದರು. ಅದರಂತೆ ಹಣ ಠೇವಣಿ ಮಾಡಲಾಗಿದೆ ಎಂದು ಉದ್ಧವ್​ ಠಾಕ್ರೆ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣದ ಟ್ರಸ್ಟ್​​ನ ಸದಸ್ಯರಾಗಿರುವ ಶಿವಸೇನೆ ಸಂಸದ ಅನಿಲ್ ದೇಸಾಯಿ ಕೂಡ ಇದರ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಆಗಸ್ಟ್​ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಲ್​ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಮೋಹನ್​ ಭಾಗವತ್​ ಸೇರಿದಂತೆ 50 ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅದ್ಧೂರಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ.

Last Updated : Aug 3, 2020, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.