ನವದೆಹಲಿ: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ರೆಬೆಲ್ ಶಾಸಕ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಸಿಬಲ್ ವಾದ ಪುರಸ್ಕರಿಸಿದ ಕೋರ್ಟ್
ರೊಹ್ಟಗಿ ಬುಧವಾರ ವಾದ ಮಂಡನೆ ಮಾಡಲಿ ಎಂದು ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ನ್ಯಾಯಪೀಠದೆದುರು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿರುವ ನ್ಯಾಯಪೀಠ ವಿಚಾರಣೆಯನ್ನ ಬುಧವಾರಕ್ಕೆ ಮುಂದೂಡಿದೆ.
ಅನರ್ಹ ಶಾಸಕರ ಸ್ಪರ್ಧೆಗೆ ನಮ್ಮ ಅಭ್ಯಂತರ ಇಲ್ಲ:
17 ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ತಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಇದು ಅನರ್ಹ ಶಾಸಕರಿಗೆ ತುಸು ನಿರಾಳ ಮಾಡಿದಂತಾಗಿದೆ.
ಚುನಾವಣಾ ಆಯೋಗದ ಅಭಿಪ್ರಾಯಕ್ಕೆ ಕಪಿಲ್ ಸಿಬಲ್ ತಕಾರಾರು. ನೀವು ಸ್ವಯಂ ಪ್ರೇರಿತವಾಗಿ ಹೇಳಿಕೆ ದಾಖಲಿಸುವಂತಿಲ್ಲ ಎಂದು ಆಕ್ಷೇಪ.
ಕಾಂಗ್ರೆಸ್ ನಾಯಕರಿಗೆ ನೋಟಿಸ್
ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯಗೆ ಸುಪ್ರೀಂ ನೋಟಿಸ್ ವಿಚಾರಣೆಗೆ ಹಾಜರಾಗಲು ಅನುಮತಿ ನೀಡುವಂತೆ ಕಾಂಗ್ರೆಸ್ ನಾಯಕರು ಕೇವಿಯಟ್ ಸಲ್ಲಿಸಲಾಗಿದೆ. ಜೆಡಿಎಸ್ ಹಾಗೂ ಸ್ಪೀಕರ್ಗೂ ನೋಟಿಸ್ ನೀಡಿದ ಸುಪ್ರೀಂಕೋರ್ಟ್.
ಕೋರ್ಟ್ನಲ್ಲಿ ರೋಹ್ಟಗಿ ವಾದ ಹೀಗಿತ್ತು
- ಶಾಸಕರ ರಾಜೀನಾಮೆ ಉದ್ದೇಶದ ಆಧಾರದ ಮೇಲೆ ಸ್ಪೀಕರ್ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ
- ಅನರ್ಹ ಶಾಸಕರ ಪರ ವಾದ ಮಂಡಿಸುತ್ತಿರುವ ಮುಕುಲ್ ರೋಹ್ಟಗಿ
- ಶಾಸಕರನ್ನು ಅನರ್ಹ ಮಾಡಿರುವುದಕ್ಕೆ ಯಾವುದೇ ಮಾನ್ಯತೆ ಇಲ್ಲ
- 2023ರ ವರೆಗೆ ಅನರ್ಹತೆ ಮಾಡಲು ಸಾಧ್ಯವೇ ಇಲ್ಲ
- ಸ್ಪೀಕರ್ ತಮ್ಮ ವಿವೇಚನೆಗೆ ತೋಚಿದಂತೆ ಮಾಡಿದ್ದಾರೆ. ಹೀಗೆ ಸಂವಿಧಾನದಲ್ಲಿ ಯಾವುದೇ ಮಾನ್ಯತೆ ಇಲ್ಲ
- ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಪೀಠ ನೀಡಿರುವ ತೀರ್ಪು ಉಲ್ಲೇಖಿಸಿರುವ ಮುಕುಲ್ ರೋಹ್ಟಗಿ
- ಸಂವಿಧಾನದ ಪರಿಚ್ಛೇದ 361 ಪ್ರಸ್ತಾಪಿಸಿದ ಮುಕುಲ್ ರೋಹ್ಟಗಿ
- ಸಂವಿಧಾನದಲ್ಲಿ ಸ್ಪೀಕರ್ ನೀಡಿರುವ ತೀರ್ಪು ಮಾನ್ಯವಾಗುವುದಿಲ್ಲ ಎಂದು ರೋಹ್ಟಗಿ ವಾದ
ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ತೀರ್ಪು ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆ.17ರಂದು ಕೈಗೆತ್ತಿಕೊಂಡಿತ್ತು. ಆದರೆ, ತ್ರಿಸದಸ್ಯ ಪೀಠದಲ್ಲಿ ಇದ್ದ ನ್ಯಾ.ಮೋಹನ್ ಶಾಂತನಗೌಡರ ಅವರು ತಾವು ಕರ್ನಾಟಕ ಮೂಲದವರು ಎಂಬ ಕಾರಣ ನೀಡಿ, ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ, ವಿಚಾರಣೆಯನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿತ್ತು.