ETV Bharat / bharat

ರಫೇಲ್​ ಡೀಲ್​.... ರಾಹುಲ್​ ಗಾಂಧಿ ಮೇಲೆ ಮುಗಿಬಿದ್ದ ಕೇಸರಿ: ಕ್ಷಮೆ ಕೇಳಲು ಒತ್ತಾಯ - etv bharat

ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ​ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಬಳಗ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಹುಲ್ ​ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಬಳಗ
author img

By

Published : Feb 14, 2019, 1:17 PM IST

ನವದೆಹಲಿ: ತನ್ನ ಸುಳ್ಳುಗಳನ್ನ ಹೇಳಲು ಸುಪ್ರೀಂಕೋರ್ಟ್​ ಆದೇಶ ಹಾಗೂ ಸಿಎಜಿ ವರದಿಯನ್ನ ಇಟ್ಟುಕೊಂಡು ಆಟ ಆಡುತ್ತಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್​ ತಪ್ಪು ಮಾಹಿತಿ ನೀಡುತ್ತಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಒತ್ತಾಯಿಸಿದ್ದಾರೆ.

ಕೇಂದ್ರ ಸಂಸತ್​​ನಲ್ಲಿ ಮಂಡಿಸಿರುವ ಸಿಎಜಿ ವರದಿಯನ್ನ ತಿರಸ್ಕರಿಸಿದ್ದು, ಡೀಲ್​​ನ ಡಿಸ್ಸೆಂಟ್​ ನೋಟ ಉಲ್ಲೇಖ ಮಾಡದಿರುವ ಹಾಗೂ ಈ ನೋಟ್​ ಅನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡಿಲ್ಲ ಎಂದು ಆರೋಪಿಸಿ ನಿನ್ನೆ ಸುದ್ದಿಗೋಷ್ಠಿ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರು, ಸರ್ವೋಚ್ಛ ನ್ಯಾಯಾಲಯ ಹಾಗೂ ಸಿಎಜಿ ವರದಿಯನ್ನ ದುರುಪಯೋಗಪಡಿಸಿಕೊಂಡು ಸುಳ್ಳುಗಳನ್ನು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದು, ಇದಕ್ಕೆ ರಾಹುಲ್​ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಈ ಬಗ್ಗೆ ಹಣಕಾಸು ಸಚಿವ ಅರುಣ್​ ಜೇಟ್ಲಿ ಸರಣಿ ಟ್ವೀಟ್​ಗಳನ್ನ ಮಾಡಿದ್ದಾರೆ. ಸುಳ್ಳುಗಳನ್ನ ಹೇಳುವ ಮೂಲಕ ಮಹಾಘಟಬಂಧನ್​ ನಿಲುವು ಏನು ಎಂಬುದು ಬಹಿರಂಗವಾಗಿದೆ ಎಂದು ರಾಹುಲ್​ ವಿರುದ್ಧ ಹರಿಹಾಯ್ದಿದ್ದಾರೆ.

ಇದೇ ವೇಳೆ, ಸುಪ್ರೀಂಕೋರ್ಟ್ ಆದೇಶ ತಪ್ಪು, ಸಿಎಜಿ ತಪ್ಪು ವಂಶಾಡಳಿತಗಾರ ಹೇಳಿದ್ದು ಮಾತ್ರ ಸರಿ ಎಂದು ಟ್ವೀಟ್​ನಲ್ಲಿ ಜೇಟ್ಲಿ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಹರಿಹಾಯ್ದಿದ್ದಾರೆ.

Intro:Body:

ರಫೇಲ್​ ಡೀಲ್​.... ರಾಹುಲ್​ ಗಾಂಧಿ ಮೇಲೆ ಮುಗಿಬಿದ್ದ ಕೇಸರಿ: ಕ್ಷಮೆ ಕೇಳಲು ಒತ್ತಾಯ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.