ಶಿಮ್ಲಾ: ಜೈಲಿನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿಯನ್ನು ಶಿಮ್ಲಾ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಹನ್ನೊಂದು ದಿನಗಳ ಕೆಳಗೆ ಅಂದ್ರೆ ಜ. 15ರಂದು ಕುಲ್ಲು ಜೈಲಿನಿಂದ ತಿಕ್ರಾ ಬೌಡಿ ಗ್ರಾಮದ ನಿವಾಸಿ ಖೇಮ್ ರಾಜ್ ಎಂಬಾತ ಪರಾರಿಯಾಗಿದ್ದ. ಹತ್ತು ದಿನ ಕಳೆದರೂ ಆರೋಪಿಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಹನ್ನೊಂದನೇ ದಿನ ಆರೋಪಿ ರಾಜ್ ಸುಳಿವು ಪತ್ತೆಯಾಗಿದೆ.
ಪಿರ್ಡಿ ಬಳಿಯ ಬಿಯಾಸ್ ನದಿ ಬಳಿ ಆರೋಪಿ ವಾಸಿಸುತ್ತಿದ್ದ. ಹತ್ತು ದಿನಗಳ ಕಾಲ ಬರೀ ಬಿಸ್ಕೇಟ್ ಮತ್ತು ನೀರು ಸೇವಿಸುತ್ತಿದ್ದ ಅತ್ಯಾಚಾರ ಆರೋಪಿ ರಾಜ್, ಭುಹಂತರ್ನಲ್ಲಿ ವಾಸಿಸುತ್ತಿದ್ದ ತನ್ನ ಗೆಳೆಯನ ಬರುವಿಕೆಗೆ ಕಾಯುತ್ತಿದ್ದನಂತೆ. ಈ ಸಮಯ ಉಪಯೋಗಿಸಿಕೊಂಡ ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.