ಹೈದರಾಬಾದ್: ಭಾರಿ ಮಳೆಯಿಂದ ತತ್ತರಿಸಿರುವ ಭಾಗ್ಯನಗರ ನಿವಾಸಿಗಳಿಗೆ ಸಹಾಯ ಮಾಡಲು ರಾಮೋಜಿ ಗ್ರೂಪ್ ಮುಂದಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಹೈದರಾಬಾದ್ನಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂತ್ರಸ್ತರಿಗೆ ಸಹಾಯ ಮಾಡಲು ರಾಮೋಜಿ ಗ್ರೂಪ್ ಆಫ್ ಮುಖ್ಯಸ್ಥ ರಾಮೋಜಿ ರಾವ್ 5 ಕೋಟಿ ರೂ. ನೀಡಿ ಸಹಾಯ ಮಾಡಿದ್ದಾರೆ.
ರಾಮೋಜಿ ಸಮೂಹದ ಪ್ರತಿನಿಧಿಯೊಬ್ಬರು ಈ ಮೊತ್ತದ ಚೆಕ್ ಅನ್ನು ತೆಲಂಗಾಣ ಐಟಿ ಮತ್ತು ಪುರಸಭೆ ಸಚಿವ ಕೆ.ಟಿ.ಆರ್ ಅವರಿಗೆ ಹಸ್ತಾಂತರಿಸಿದ್ದಾರೆ.
ಇಂದು ಸಹ ಹೈದರಾಬಾದ್ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.