ETV Bharat / bharat

ರಾಜಸ್ಥಾನ ಹೈಕೋರ್ಟ್​​ನಲ್ಲಿ ಪೈಲಟ್ ಸೇರಿ 19 ಶಾಸಕರ 'ಅನರ್ಹತೆ' ವಿಚಾರಣೆ - ಸಿಬಿಐ ವಿಚಾರಣೆ

ರಾಜಸ್ಥಾನ ರಾಜಕೀಯದಲ್ಲಿ ಅಸ್ಥಿರತೆಯ ಆತಂಕ ಕಾಣಿಸಿಕೊಂಡಿದ್ದು, ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ವಿರುದ್ಧ ಬಂಡಾಯ ಹೂಡಿದ್ದ ಶಾಸಕರ ಅನರ್ಹತೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿದೆ.

Rajasthan political crisis
ರಾಜಸ್ಥಾನ ರಾಜಕೀಯ
author img

By

Published : Jul 20, 2020, 12:12 PM IST

ಜೈಪುರ ( ರಾಜಸ್ಥಾನ): ಅನರ್ಹತೆ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನದ ಸಚಿನ್ ಪೈಲಟ್​ ಹಾಗೂ 18 ಶಾಸಕರ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್​ನಲ್ಲಿ ನಡೆಯುತ್ತಿದೆ.

ಮತ್ತೊಂದೆಡೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಆಡಿಯೋ ಸುರುಳಿ ವಿವಾದವನ್ನು ಸಿಬಿಐ ವಶಕ್ಕೆ ನೀಡಬೇಕೆಂದು ರಾಜಸ್ಥಾನ ವಿಪಕ್ಷ ನಾಯಕ ಗುಲಾಬ್​ ಚಂದ್ ಕಟಾರಿಯಾ ಆಗ್ರಹಿಸಿದ್ದಾರೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಧಿಕಾರವನ್ನು ತಮ್ಮ ಸಿಎಂ ಹುದ್ದೆ ಉಳಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಲಾಬ್​ ಚಂದ್ ಕಟಾರಿಯಾ ಆರೋಪಿಸಿದ್ದು, ಫೋನ್​ ಟ್ಯಾಪಿಂಗ್​ ಖಾಸಗಿತನದ ಉಲ್ಲಂಘನೆಯಾಗಿದ್ದು ಎಂದು ಈ ವೇಳೆ ದೂರಿದ್ದಾರೆ.

ಸಿಎಂ ಅಶೋಕ್ ಗೆಹ್ಲೋಟ್​ ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರನ್ನು ಎದುರಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಟಾರಿಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿವಾದವನ್ನು ಸಿಬಿಐ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಬಹುಮತವಿದ್ದರೂ ಅವರನ್ನು ಏಕೆ ಹೋಟೆಲ್​ನಲ್ಲಿ ಇಡಲಾಗಿದೆ? ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಸಚಿನ್ ಪೈಲಟ್​​​​​ ಹಾಗೂ ಸಿಎಂ ಗೆಹ್ಲೋಟ್​ ನಡುವಿನ ಒಳಜಗಳ ರಾಜಸ್ಥಾನ ರಾಜಕೀಯದಲ್ಲಿ ಅಸ್ತಿರತೆ ತಂದಿದೆ. ಅವರಿಬ್ಬರಿಂದಲೇ ರಾಜ್ಯದಲ್ಲಿ ಈ ವಾತಾವರಣ ನಿರ್ಮಾಣವಾಗಿದೆ ಎಂದಿರುವ ಕಟಾರಿಯಾ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿರುವ ಎಲ್ಲ ಆರೋಪಗಳು ಕೂಡಾ ಸುಳ್ಳು. ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗ ಸಚಿನ್​ ಪೈಲಟ್ ಹಾಗೂ 18 ಮಂದಿ ಕಾಂಗ್ರೆಸ್ ಬಂಡಾಯ ಶಾಸಕರ ಅನರ್ಹತೆಯ ಬಗ್ಗೆ ರಾಜಸ್ಥಾನ ಹೈಕೋರ್ಟ್​ ವಿಚಾರಣೆ ನಡೆಸುತ್ತಿದ್ದು, ಬಂಡಾಯ ಶಾಸಕರ ಭವಿಷ್ಯ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.