ಜೋಧಪುರ್: ಆಲ್ ಇಂಡಿಯಾ ಇನ್ಸ್ಟ್ಯೂಟ್ನಲ್ಲಿ(ಏಮ್ಸ್) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸಂಸದ ಮದನ್ ಲಾಲ್ ಸೈನಿ(76) ಸಾವನ್ನಪ್ಪಿದ್ದಾರೆ.
ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮದಲ್ ಲಾಲ್ ಸೈನಿ ಏಮ್ಸ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ನಿಧನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೊಟ್ ಸಂತಾಪ ಸೂಚಿಸಿದ್ದಾರೆ.
ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ರಾಜಸ್ಥಾನ ಮಾಜಿ ಸಿಎಂ ವಸುಧರೆ ರಾಜೇ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ರಜಪೂತ್ ಸಮುದಾಯಕ್ಕೆ ಸೇರಿದ ಮದನ್ ಲಾಲ್ ಸೈನಿ, ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಮಹಾರಾಣಾ ಪ್ರತಾಪ್ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ್ದ ಮದನ್ ಲಾಲ್,ಚಾರಿತ್ರ್ಯಹೀನ ಅಕ್ಬರ್ ಸ್ತ್ರೀವೇಷ ಧರಿಸಿ ಮೀನಾ ಬಜಾರ್ಗೆ ಬಂದು ಅಲ್ಲಿಗೆ ಆಗಮಿಸುತ್ತಿದ್ದ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತನೆ ಮಾಡ್ತಿದ್ದನು ಎಂದು ವಿವಾದಿತ ಹೇಳಿಕೆ ನೀಡಿದ್ದರು.