ನವದೆಹಲಿ: ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಇದೀಗ ಇತರ ದೇಶಗಳಲ್ಲೂ ಹರಡಿದ್ದು, ಭಾರತಕ್ಕೂ ಇದರ ಬಿಸಿ ತಟ್ಟಿದೆ.
ಇದರ ಮಧ್ಯೆ ಕತಾರ್ಗೆ ವಿಮಾನಗಳು ಪ್ರಯಾಣ ಬೆಳಸದಂತೆ ಅಲ್ಲಿನ ಸರ್ಕಾರ ತಾತ್ಕಾಲಿಕ ನಿಷೇಧ ಹೇರಿದ್ದು, ಭಾರತ, ಬಾಂಗ್ಲಾ ಸೇರಿದಂತೆ 13 ರಾಷ್ಟ್ರಗಳ ಮೇಲೆ ಈ ನಿರ್ಬಂಧ ಹಾಕಲಾಗಿದೆ. ಈಗಾಗಲೇ ಎಲ್ಲ ಏರ್ಲೈನ್ಸ್ಗಳಲ್ಲಿ ಕತಾರ್ ಸೂಚನೆ ನೀಡಿದೆ.
![Qatar bans entry of people from India](https://etvbharatimages.akamaized.net/etvbharat/prod-images/6347601_24_6347601_1583740729307.png)
ಚೀನಾ, ಈಜಿಪ್ತ್, ಇರಾನ್, ಇರಾಕ್, ನೇಪಾಳ, ಪಾಕಿಸ್ತಾನ, ಫಿಲಿಫಿನ್ಸ್, ದಕ್ಷಿಣ ಕೋರಿಯಾ,ಶ್ರೀಲಂಕಾ, ಸಿರಿಯಾ ಹಾಗೂ ಥಾಯ್ಲೆಂಡ್ ಮೇಲೆ ನಿರ್ಬಂಧ ಹೇರಲಾಗಿದ್ದು, ಮುಂದಿನ ಆದೇಶ ಹೊರ ಬೀಳುವವರೆಗೂ ಈ ದೇಶದ ವಿಮಾನಗಳು ಕತಾರ್ಗೆ ಪ್ರಯಾಣ ಮಾಡುವ ಹಾಗಿಲ್ಲ. ಇನ್ನು ಕತಾರ್ನಿಂದ ಭಾರತಕ್ಕೂ ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ.
ಈಗಾಗಲೇ ಕತಾರ್ನಲ್ಲೂ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರಲ್ಲಿ ಏರಿಕೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಭಾರತದಲ್ಲಿ ಈಗಾಗಲೇ ಕೊರೊನಾ ವೈರಸ್ ಶಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.