ಸಿಕ್ಕಿಂ: ನೂರಾರು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಬೆಂಬಲಿಗರ ಸಮ್ಮುಖದಲ್ಲಿ 51 ವರ್ಷದ ಪಿ.ಎಸ್. ಗೋಲೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧ್ಯಕ್ಷರೂ ಆಗಿರುವ ಪ್ರೇಮ್ ಸಿಂಗ್ ತಮಾಂಗ ಅವರು ಪಿ.ಎಸ್. ಗೋಲೆ ಎಂದೇ ಪ್ರಸಿದ್ಧರು.
ಇವರಿಗೆ ರಾಜ್ಯಪಾಲ ಗಂಗಾಪ್ರಸಾದ್ ಅವರು ಪಲಿಜಾರ್ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದರು.
ವಿಶೇಷ ಎಂದರೆ ಗೋಲೆ ಶಾಸನಸಭೆಯ ಸದಸ್ಯರಲ್ಲ. ಅವರು ಚುನಾವಣೆಗೂ ನಿಂತಿರಲಿಲ್ಲ. ಈ ನಡುವೆ ಈ ಪ್ರಮಾಣ ವಚನ ಸಮಾರಂಭಕ್ಕೆ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ನ ಹಿರಿಯ ನಾಯಕರು ಗೈರು ಹಾಜರಾದರು.