ETV Bharat / bharat

ಕೊರೊನಾ ನೆಪವೊಡ್ಡಿ ಚಿಕಿತ್ಸೆ ನಿರಾಕರಣೆ: ನೋಯ್ಡಾದಲ್ಲಿ ಗರ್ಭಿಣಿ ಸಾವು - ನೋಯ್ಡಾದಲ್ಲಿ ಗರ್ಭಿಣಿ ಮಹಿಳೆ ಸಾವು

ಕೊರೊನಾ ನೆಪವೊಡ್ಡಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ ಹಿನ್ನೆಲೆ ಗರ್ಭಿಣಿ ಆ್ಯಂಬುಲೆನ್ಸ್​ನಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.

Pregnant woman dies in ambulance in Noida, probe ordered
ನೋಯ್ಡಾದಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ಮಹಿಳೆ ಸಾವು
author img

By

Published : Jun 7, 2020, 8:29 AM IST

Updated : Jun 7, 2020, 9:09 AM IST

ಗೌತಮ್ ಬುದ್ಧ ನಗರ : ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲ್ಪಟ್ಟ ಹಿನ್ನೆಲೆ ಖೋಡಾ ಗ್ರಾಮದ ಗರ್ಭಿಣಿ ಸಾವಿಗೀಡಾಗಿದ್ದು, ಪ್ರಕರಣದ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.

ಗರ್ಭಿಣಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಬೆಳಿಗ್ಗೆ 6 ಗಂಟೆಯ ವೇಳೆಗೆ ಆ್ಯಂಬುಲೆನ್ಸ್​ನಲ್ಲಿ ನೋಯ್ಡಾದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಕೊರೊನಾ ವೈರಸ್​ ನೆಪವೊಡ್ಡಿ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಗಳು, ಗಾಝಿಯಾಬಾದ್​ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದವು. ಬೆಳಿಗ್ಗೆಯಿಂದ ಸಂಜೆ ತನಕ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಸಂಜೆ ವೇಳೆಗೆ ಮಹಿಳೆ ಆ್ಯಂಬುಲೆನ್ಸ್​ನಲ್ಲೆ ಪ್ರಾಣ ಬಿಟ್ಟಳು ಎಂದು ಈ ಸಂಬಂಧ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಡಿಎಂ ಮುನೀಂದ್ರ ಉಪಾದ್ಯಾಯ ನೇತೃತ್ವದಲ್ಲಿ ತಂಡ ರಚಿಸಿದ ಜಿಲ್ಲಾಧಿಕಾರಿ ಸುಹಾಸ್​ ಎಲ್​.ವೈ, ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್ ಬುದ್ಧ ನಗರದ ಸಿಎಂಒ, ನಾವು ತನಿಖೆ ನಡೆಸುತ್ತಿದ್ದೇವೆ, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

Last Updated : Jun 7, 2020, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.