ಕುಲ್ಲು(ಹಿಮಾಚಲ ಪ್ರದೇಶ): ಇಲ್ಲಿನ ಸೋಲಂಗ್ನಲಾ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರಿಂದಾಗಿ ಪ್ರವಾಸಕ್ಕೆ ತೆರಳಿರುವ ಸುಮಾರು 300 ಮಂದಿ ಭಾರೀ ಹಿಮಪಾತದಲ್ಲಿ ಸಿಲುದ್ದರು. ಆದರೆ, ಪೊಲೀಸರು ಈ ಎಲ್ಲ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಸೋಲಂಗ್ನಲಾದಲ್ಲಿ ಹವಾಮಾನ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ನೋಡ ನೊಡ್ತಿದ್ದಂತೆ ಭಾರೀ ಮಟ್ಟದಲ್ಲಿ ಹಿಮಮಳೆ, ಹಿಮಪಾತವಾಗಲು ಶುರುವಾಯಿತು. ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ವಾಹನಗಳು ರೋಹ್ಟಾಂಗ್‌ನ ಅಟಲ್ ಸುರಂಗದ ಬಳಿ ನಿಂತಲ್ಲೇ ಸಿಲುಕಿಕೊಂಡವು.
ತಡರಾತ್ರಿ 1 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ತೊಡಗಿಸಿಕೊಂಡ ಕುಲ್ಲು ಪೊಲೀಸರು ಎಲ್ಲಾ ಪ್ರವಾಸಿಗರನ್ನ ಬೇರೆ ವಾಹನಗಳ ಮೂಲಕ ಸ್ಥಳಾಂತರಿಸಿ ಸುರಕ್ಷಿತ ಹೋಟೆಲ್‌ಗೆ ಕರೆದೊಯ್ದರು. ಸೋಲಾಂಗ್ನಲಾನಿಂದ ಅಟಲ್ ಸುರಂಗದ ಕಡೆಗೆ ಸಾಗುತ್ತಿದ್ದ ಪ್ರವಾಸಿಗರು ಹಿಮಪಾತದಲ್ಲಿ ಸಿಲುಕಿದ್ದರು.
ನಾಲ್ಕು-ನಾಲ್ಕು ವಾಹನಗಳು ಕಾರ್ಯನಿರ್ವಹಿಸುತ್ತಿದ್ದರೂ, ಅನೇಕ ಪ್ರವಾಸಿಗರು ಹಿಮದಲ್ಲಿ ತಮ್ಮ ವಾಹನಗಳನ್ನು ಓಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಅವರ ವಾಹನಗಳು ಹಿಮಪಾತದ ನಡುವೆ ಜಾರಿಕೊಳ್ಳಲು ಪ್ರಾರಂಭಿಸಿದವು. ಈ ಅವಧಿಯಲ್ಲಿ ಪ್ರವಾಸಿಗರು ಹಲವಾರು ಗಂಟೆಗಳ ಕಾಲ ಆಹಾರ, ನೀರು ಇಲ್ಲದೆ ಪರದಾಡುವಂತಾಯಿತು.
ರಕ್ಷಣಾ ಕಾರ್ಯಾಚರಣೆ ಶನಿವಾರ ಸಂಜೆ ಪ್ರಾರಂಭವಾಗಿ, ಮಧ್ಯರಾತ್ರಿಯ ನಂತರವೂ ಮುಂದುವರೆದಿತ್ತು. ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರನ್ನು ಧುಂಧಿ ಮತ್ತು ಸುರಂಗದ ದಕ್ಷಿಣ ಪೋರ್ಟಲ್ ನಿಂದ ರಕ್ಷಿಸಿ ಮನಾಲಿಯ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ಮತ್ತು ಮನಾಲಿಯ ಎಸ್‌ಹೆಚ್‌ಒ ಭಾಗಿಯಾಗಿದ್ದರು.