ETV Bharat / bharat

ಶಬರಿಮಲೆ ಚಾರಣಕ್ಕೆ ಹೊರಟ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು! - ಬೆಟ್ಟ ಏರಲು ಹೊರಟ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು

ನವೆಂಬರ್​ 16ರಿಂದ ಶಬರಿಮಲೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಶಬರೀಶನ ದರ್ಶನಕ್ಕೆ ಭಕ್ತಗಣವೇ ಆಗಮಿಸುತ್ತಿದೆ. ಈ ನಡುವೆ ತಮ್ಮ ಕುಟುಂಬಸ್ಥರ ಜೊತೆಗೆ ಶಬರಿಮಲೆ ಏರಲು ಮುಂದಾಗಿದ್ದ 12 ವರ್ಷದ ಬಾಲಕಿಯನ್ನು ಪೊಲೀಸರು ತಡೆದಿದ್ದಾರೆ.

ಶಬರಿಮಲೆ ಚಾರಣಕ್ಕೆ ಹೊರಟ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು
author img

By

Published : Nov 19, 2019, 1:24 PM IST

ತಿರುವನಂತಪುರಂ(ಕೇರಳ): ಇದೇ ನವೆಂಬರ್​ 16ರಿಂದ ಶಬರಿಮಲೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಶಬರೀಶನ ದರ್ಶನಕ್ಕೆ ಭಕ್ತಗಣವೇ ಆಗಮಿಸುತ್ತಿದೆ. ಈ ನಡುವೆ ಬೆಟ್ಟ ಏರಲು ಹೊರಟ 12 ವರ್ಷದ ಬಾಲಕಿಯನ್ನು ಪೊಲೀಸರು ತಡೆದಿದ್ದಾರೆ.

ಈ ಬಾಲಕಿ ತಮ್ಮ ಕುಟುಂಬಸ್ಥರ ಜೊತೆಗೆ ಶಬರಿಮಲೆ ಏರಲು ಮುಂದಾಗಿದ್ದಳು. ಈ ವೇಳೆ ತಡೆದ ಪೊಲೀಸರು, ಬಾಲಕಿಯ ಗುರುತಿನ ಚೀಟಿಯಲ್ಲಿನ ವಯಸ್ಸನ್ನು ಗಮನಿಸಿ ಆಕೆಗೆ ಪ್ರವೇಶ ನಿರಾಕರಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಶಬರಿಮಲೆ ವಿವಾದ ಕುರಿತಂತೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್​ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಆ ಮೂಲಕ 2018ರಲ್ಲಿ ಸುಪ್ರೀಂ ಪ್ರತಿಪಾದಿಸಿದ್ದ ತೀರ್ಪು ಈಗಲೂ ಪ್ರಸ್ತುತವಿದೆ. ಅಂದರೆ ಎಲ್ಲಾ ವಯೋಮಾನದ ಮಹಿಳೆಯರೂ ಶಬರಿಮಲೆಗೆ ಹೋಗಬಹುದು. ಆದರೆ ಪೊಲೀಸರು ಈ ಸೂಕ್ಷ್ಮ ವಿಚಾರದ ಬಗ್ಗೆ ಎಚ್ಚೆತ್ತು, 10 ವರ್ಷಕ್ಕಿಂತ ಮೇಲ್ಪಟ್ಟವರ ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ.

Intro:Body:

shabarimala

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.