ಹೈದರಾಬಾದ್: ಮುಂದಿನ ಪೀಳಿಗೆಗೆ ಮಹಾತ್ಮ ಗಾಂಧಿಜಿಯವರ ಕೊಡುಗೆಯನ್ನು ಪ್ರಸ್ತುತಪಡಿಸುವಲ್ಲಿ ಈನಾಡು ಸಮೂಹ ಸಂಸ್ಥೆಯ ಅಧ್ಯಕ್ಷ ರಾಮೋಜಿ ರಾವ್ ಅವರು ನೀಡಿರುವ ಕೊಡುಗೆಯನ್ನ ಪ್ರಧಾನಿ ನರೇಂದ್ರ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ವಿಶೇಷವಾಗಿ ಬಾಲಿವುಡ್ ನಟ-ನಟಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈಟಿವಿ ಭಾರತ ಪ್ರಸ್ತುತಪಡಿಸಿದ್ದ ಬಾಪು ಕುರಿತ 'ವೈಷ್ಣವ ಜನತೋ.. ತೆನೆ ರೆ ಕಹಿಯೇ.. ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.
ಗಾಂಧಿಯವರ ನೆಚ್ಚಿನ ಭಜನೆ ಗೀತೆಯಾದ ವೈಷ್ಣವ ಜನತೋ.. ಮರು ಸೃಷ್ಟಿಸುವುದಕ್ಕೆ ಪ್ರಮುಖ ಕಲಾವಿದರನ್ನು ಒಟ್ಟುಗೂಡಿಸಲು ಈಟಿವಿ ಭಾರತ ಪಟ್ಟ ಪ್ರಯತ್ನವನ್ನ ಈ ವೇಳೆ ಮೋದಿ ಶ್ಲಾಘಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಈನಾಡು ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿರುವ ಪ್ರಧಾನಿ ಮೋದಿ, 'ಷೈಷ್ಣವ ಜನತೋ' ಹಾಡಿನ ಹಿಂದಿರುವ ಎಲ್ಲರನ್ನು ಅಭಿನಂದಿಸಿದ್ದಾರೆ. ಸ್ವಚ್ಛ ಭಾರತ ಪರಿಕಲ್ಪನೆಗೆ ಈನಾಡು ಸಮೂಹ ಸಂಸ್ಥೆಯ ಕೊಡುಗೆಯನ್ನು ಮೋದಿ ಸ್ಮರಿಸಿದ್ದಾರೆ. ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಸಾಮಾಜಿಕ ಕಳಕಳಿಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರಾಷ್ಟ್ರಪಿತನ 150ನೇ ಜನ್ಮ ಸ್ಮರಣೆ; ಬಾಪುವಿಗೆ ಈಟಿವಿ ಭಾರತ ವಿಶೇಷ ನಮನ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನದ ವಿಶೇಷವಾಗಿ ಈಟಿವಿ ಭಾರತ ದೇಶದ ವಿವಿಧ ಭಾಷೆಯ ಮಹಾನ್ ಗಾಯಕರಿಂದ ವೈಷ್ಣವ ಜನತೋ ಗೀತೆಯನ್ನು ಹಾಡಿಸಿ ಅಕ್ಟೋಬರ್ 2ರಂದು ಲೋಕಾರ್ಪಣೆಗೊಳಿಸಿತ್ತು. ಈ ಗೀತೆಯನ್ನು ಕೇಳಿದ ಪ್ರಧಾನಿ ಸಹಿತ ದೇಶದ ಗಣ್ಯರು ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದರು.