ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರಕ್ಕೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಭಾರತದೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿತ್ತು. ಅಸಲಿಗೆ ಈ ನಿರ್ಧಾರ ಪಾಕಿಸ್ತಾನಕ್ಕೆ ಹೆಚ್ಚಿನ ಹೊಡೆತ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.
ಪಾಕ್ಗೆ ನುಂಗಲಾರದ ತುತ್ತಾದ ಆರ್ಟಿಕಲ್ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!
ಪಾಕಿಸ್ತಾನ ಹಲವು ವಿಚಾರಗಳಲ್ಲಿ ಭಾರತದ ಮೇಲೆ ಅವಲಂಬಿತವಾಗಿದೆ. ಈರುಳ್ಳಿ, ಟೊಮ್ಯಾಟೊ ಸೇರಿದಂತೆ ಅಗತ್ಯ ವಸ್ತುಗಳನ್ನು ಭಾರತದಿಂದ ಪಾಕ್ ಅಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಪಾಕಿಸ್ತಾನ ತಾನು ತೋಡಿದ ಗುಂಡಿಗೆ ತಾನೇ ಬಿದ್ದಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಪ್ರಧಾನ ನಿರ್ದೇಶಕ ಅಜಯ್ ಸಹಾಯ್ ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ನೆಲದಲ್ಲಿರುವ ಉಗ್ರರನ್ನು ಮೊದಲು ಮಟ್ಟಹಾಕಿ: ಪಾಕ್ಗೆ ಅಮೆರಿಕ ಖಡಕ್ ಸಂದೇಶ
ಪುಲ್ವಾಮಾ ದಾಳಿಯ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು. ಭಾರತ ಹಂತ ಹಂತವಾಗಿ ಪಾಕಿಸ್ತಾನದ ಅವಲಂಬನೆಯನ್ನು ಕಡಿಮೆ ಮಾಡಿ, ರಫ್ತು ಸಹ ತೀವ್ರವಾಗಿ ಇಳಿಕೆ ಮಾಡಿತ್ತು. ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಪಾಕಿಸ್ತಾನ ಚಿಂತಿತವಾಗಿದ್ದು, ಭಾರತದ ನಡೆ ಬಗ್ಗೆ ಪಾಕಿಸ್ತಾನದಲ್ಲಿ ಸಹಜ ಆತಂಕ ಶುರುವಾಗಿದೆ.