ETV Bharat / bharat

ಗಡಿಯಲ್ಲಿ ಶೆಲ್​​​​ ದಾಳಿ ನಡೆಸಿದ ಪಾಕ್​​: ಭಾರತದ ಸೇನೆಯಿಂದ ತಕ್ಕ ಪ್ರತ್ಯುತ್ತರ

author img

By

Published : Sep 7, 2019, 7:56 PM IST

ಕಳೆದ ಒಂದು ವಾರದಿಂದ ಸುಮ್ಮನಿದ್ದ ಪಾಕ್​ ಇಂದು ಮತ್ತೆ ಗಡಿಯಲ್ಲಿ ಶೆಲ್ ದಾಳಿ ನಡೆಸಿದೆ.

ಕದನ ವಿರಾಮ ಉಲ್ಲಂಘನೆ

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ಫಾರ್ವರ್ಡ್​ ಪೋಸ್ಟ್​ ಮತ್ತು ಹಳ್ಳಿಗಳ ಮೇಲೆ ಪಾಕಿಸ್ತಾನ ಸೇನೆ ಶೆಲ್​ ದಾಳಿ ನಡೆಸಿದೆ.

ಕಳೆದ ಒಂದು ವಾರದಿಂದ ಸುಮ್ಮನಿದ್ದ ಪಾಕ್​ ಮತ್ತೆ ದಾಳಿ ನಡೆಸಿದೆ. ಬೆಳಿಗ್ಗೆ 7.45ರ ಸುಮಾರಿಗೆ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಗಡಿಯುದ್ದಕ್ಕೂ ಸಣ್ಣ ಶಸ್ತ್ರಾಸ್ತ್ರ ಮತ್ತು ಶೆಲ್​ ದಾಳಿ ಆರಂಭವಾಯಿತು ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತೀಯ ಸೇನೆಯೂ ಪ್ರತಿ ದಾಳಿ ನಡೆಸಿದ್ದು, ಕೊನೆಯ ವರದಿ ಬಂದಾಗ ಎರಡೂ ಕಡೆಯೂ ಶೆಲ್​ ದಾಳಿ ಮುಂದುವರೆದಿತ್ತು. ಅದೃಷ್ಟವಶಾತ್ ಭಾರತದ ಸೈನಿಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದಿದ್ದಾರೆ.

ಕಳೆದ ಒಂದು ವಾರದ ಹಿಂದೆ ಪಾಕ್​ ನಡೆಸಿದ್ದ ಶೆಲ್​ ದಾಳಿಯಿಂದ ಭಾರತದ ಯೋಧರೊಬ್ಬರು ಹುತಾತ್ಮರಾಗಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.