ಪಶ್ಚಿಮ ಬಂಗಾಳ: ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು ವರ್ಷವಾಗಿದೆ. ಆದರೆ, ಇಂದಿಗೂ ಕೂಡ ಪಶ್ಚಿಮ ಬಂಗಾಳದ ಹುತಾತ್ಮ ಯೋಧ ಬಬ್ಲು ಸಂತ್ರಾರ ಕುಟುಂಬಸ್ಥರು ಮಾತ್ರ ಸೇಡು ತೀರಿಸಿಕೊಳ್ಳಲು ನಾವು ಬಯಸುವುದಿಲ್ಲ ಎಂದು ಹೇಳುತ್ತಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಸಿಬ್ಬಂದಿಗಳಲ್ಲಿ ಪಶ್ಚಿಮ ಬಂಗಾಳದ ಹೌರಾದ ಬೌರಿಯಾ ಗ್ರಾಮದ ಯೋಧ ಬಬ್ಲು ಸಂತ್ರಾ ಕೂಡ ಒಬ್ಬರು. ಬಬ್ಲು ಸಂತ್ರಾರನ್ನು ಕಳೆದುಕೊಂಡ ನೋವಿನಲ್ಲೇ ಇನ್ನೂ ಅವರ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದರೂ ಕೂಡ ಇಂದಿಗೂ ಅವರು ಪ್ರತೀಕಾರ ಮಾತ್ರ ಬಯಸುತ್ತಿಲ್ಲ. ನಮಗೆ ಯುದ್ಧ ಬೇಡ, ಶಾಂತಿ ಬೇಕು ಎಂದು ಬಬ್ಲು ಸಂತ್ರಾರ ಸಹೋದರ ಕಲ್ಯಾಣ್ ಸಂತ್ರಾ ಹೇಳುತ್ತಾರೆ.
2019ರ ಫೆ.14 ರಂದು ನಡೆದ ಪುಲ್ವಾಮ ದಾಳಿಗೆ ಇಡೀ ದೇಶವೇ ಕಣ್ಣೀರಿಟ್ಟಿದ್ದು, ತಮ್ಮೂರ ಪುತ್ರನನ್ನು ಕಳೆದುಕೊಂಡ ಬೌರಿಯಾ ಗ್ರಾಮದಲ್ಲಿ ಅಂದು ಕತ್ತಲೆ ಆವರಿಸಿತ್ತು. ಭಾರತದ ಧ್ವಜವನ್ನು ಬೀಸಿ, ಬಬ್ಲು ಸಂತ್ರಾ ಅಮರ್ ರಹೇ ಎಂದು ಗ್ರಾಮದ ಜನರು ಘೋಷಣೆಗಳನ್ನು ಕೂಗಿದ್ದರು.