ETV Bharat / bharat

ಯುವಕನಿಗೆ ಏಳು ದಿನ 'ಶೌಚಾಲಯ ಕ್ವಾರಂಟೈನ್'​: ಒಡಿಶಾದಲ್ಲಿ ಅಮಾನವೀಯ ಘಟನೆ - ಲಾಕ್​ಡೌನ್​

28 ವರ್ಷದ ಯುವಕನೊಬ್ಬ ಸ್ವಚ್ಛ ಭಾರತ ಶೌಚಾಲಯದೊಳಗೆ ಹೋಮ್​ ಕ್ವಾರಂಟೈನ್‌ ಕಳೆದ ಘಟನೆ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ.

toilet quarantine
ಶೌಚಾಲಯ ಕ್ವಾರಂಟೈನ್
author img

By

Published : Jun 18, 2020, 12:16 PM IST

ಜಗತ್ಸಿಂಗ್‌ಪುರ (ಒಡಿಶಾ): ತಮಿಳುನಾಡಿನಿಂದ ಒಡಿಶಾಗೆ ಹಿಂದಿರುಗಿದ 28 ವರ್ಷದ ಯುವಕನೊಬ್ಬ ಶೌಚಾಲಯದೊಳಗೆ ಹೋಮ್​ ಕ್ವಾರಂಟೈನ್ ಕಳೆದ ಘಟನೆ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಬೇರೆ ರಾಜ್ಯಗಳಿಂದ ಒಡಿಶಾಗೆ ಬಂದವರು 14 ದಿನಗಳು ಕ್ವಾರಂಟೈನ್​ನಲ್ಲಿ ಕಳೆಯುವುದು ಕಡ್ಡಾಯವಾಗಿದೆ. ಇದರಲ್ಲಿ ಏಳು ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್​ ಹಾಗೂ ಉಳಿದ ಏಳು ದಿನ ಹೋಮ್​ ಕ್ವಾರಂಟೈನ್​ನಲ್ಲಿರುವಂತೆ ನಿಯಮ ರೂಪಿಸಲಾಗಿದೆ.

ಶೌಚಾಲಯ ಕ್ವಾರಂಟೈನ್

ಲಾಕ್​ಡೌನ್​ ಸ್ವಲ್ಪ ತೆರವಾದ ನಂತರ ತಮಿಳುನಾಡಿನಿಂದ ವಾಪಸ್​ ಆಗಿದ್ದ ನುವಾಗಾನ್​ ಬ್ಲಾಕ್​ನ ಜಮಾಗಾಂವ್​ ಮಾನಸ್​ ಪತ್ರಾ ಎಂಬಾತ ಸುಡುಕಂತಿ ಎಂಬಲ್ಲಿಯ ಸರ್ಕಾರಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಕಳೆಯಬೇಕಾಯಿತು. ಏಳು ದಿನಗಳ ನಂತರ ಆತನನ್ನು ಹೋಮ್​ ಕ್ವಾರಂಟೈನ್​ಗೆ ತೆರಳುವಂತೆ ಸೂಚಿಸಲಾಯಿತು. ಪ್ರತ್ಯೇಕ ಮನೆಯಿಲ್ಲದ ಕಾರಣ ಅಧಿಕಾರಿಗಳ ಬಳಿ ಮಾನಸ್​ ಪತ್ರಾ ಮನವಿ ಮಾಡಿದರೂ ಸರ್ಕಾರಿ ಕ್ವಾರಂಟೈನ್​ನಲ್ಲಿರಲು ಆತನಿಗೆ ಅವಕಾಶ ನೀಡಿರಲಿಲ್ಲ.

ಆತನ ಮನೆಯಲ್ಲಿ ಈಗಾಗಲೇ ಆರು ಮಂದಿ ವಾಸವಿದ್ದು, ಕ್ವಾರಂಟೈನ್​ನಲ್ಲಿರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರಿ ಕ್ವಾರಂಟೈನ್​ನಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಸಿಗದ ಕಾರಣದಿಂದ ತನ್ನ ಮನೆಯ ಸಮೀಪದಲ್ಲಿಯೇ ಇದ್ದ, ಹೊಸದಾಗಿ ನಿರ್ಮಿಸಿದ್ದ, ಸ್ವಚ್ಚ ಭಾರತ ಶೌಚಾಲಯದಲ್ಲಿ ಮಾನಸ್​ ಉಳಿದುಕೊಂಡಿದ್ದಾನೆ. ಸುಮಾರು ಏಳು ದಿನದ ಕ್ವಾರಂಟೈನ್ ಅನ್ನು ಜೂನ್​ 9ರಿಂದ 15ರವರೆಗೆ ಕಳೆದಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.