ETV Bharat / bharat

ಮೃತ ವ್ಯಕ್ತಿ ಅಂತ್ಯಕ್ರಿಯೆ ನಡೆಸಲು ಕುಟುಂಬ ಹಿಂದೇಟು... NGO ಮಹಿಳೆಯಿಂದ ಕಾರ್ಯ!

ಕೋವಿಡ್​-19 ಭಯದಿಂದಾಗಿ ಮೃತ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸಲು ಕೆಲ ಕುಟುಂಬ ಹಿಂದೇಟು ಹಾಕುತ್ತಿದ್ದು, ಅಂತಹ ಘಟನೆವೊಂದು ಘಾಜಿಯಾಬಾದ್​​ನಲ್ಲಿ ನಡೆದಿದೆ.

author img

By

Published : Jun 1, 2020, 4:27 AM IST

COVID-19 scare
COVID-19 scare

ಘಾಜಿಯಾಬಾದ್​: ರಿಕ್ಷಾ ಎಳೆಯುವ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಹಿಂದೇಟು ಹಾಕಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​​ನಲ್ಲಿ ನಡೆದಿದೆ.

ಆಟೋ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಕೋವಿಡ್​ ಹರಡುವ ಭೀತಿಯಿಂದಾಗಿ ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಅಂತಿಮ ವಿಧಿ-ವಿಧಾನ ನಡೆಸಲು ಹಿಂದೇಟು ಹಾಕಿದ್ದಾರೆ. ಇದರ ಮಾಹಿತಿ ಸಿಗುತ್ತಿದ್ದಂತೆ ಎನ್​ಜಿಒವೊಂದರ ಮುಖ್ಯಸ್ಥೆಯಾಗಿರುವ ಮಮತಾ ಸಿಂಗ್​​ ಮುಂದೆ ನಿಂತು ಎಲ್ಲ ಕಾರ್ಯ ನಡೆಸಿದ್ದಾರೆ.

ಆನಂದ್ ಸೇವಾ ಸಮಿತಿ ಮುಖ್ಯಸ್ಥೆ ಆಗಿರುವ ಇವರು ಖುದ್ದಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನನಗೆ ಫೋನ್​ ಮೂಲಕ ಇದರ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಹೋಗಿ ಅಂತ್ಯಕ್ರಿಯೆ ನಡೆಸಿರುವೆ ಎಂದಿದ್ದು, ಈ ವೇಳೆ ಕುಟುಂಬದ ಒಂದಿಬ್ಬರು ನನ್ನೊಂದಿಗೆ ಇದ್ದರು ಎಂದಿದ್ದಾರೆ.

ದೇಶದಲ್ಲಿ ಕೊರೊನಾ ಭಯದಿಂದ ಜನರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದು, ಸುರಕ್ಷತಾ ಕ್ರಮ ಕೈಗೊಂಡರೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.