ನವದೆಹಲಿ: ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಯಶಸ್ವಿಯಾಗಿ ಸ್ಕೀ-ಜಂಪ್ ಟೇಕ್ ಆಫ್ ಆಗುವ ಮೂಲಕ ಲಘು ಯುದ್ಧ ವಿಮಾನ 'ತೇಜಸ್ ಎಂಕೆ1' ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ.
-
Indian Navy: The developmental Light Combat Aircraft (LCA)(N) MK1 achieved another important milestone today by successfully undertaking the maiden Ski Jump take-off from INS Vikramaditya, earlier today. pic.twitter.com/XFlLm1MvrZ
— ANI (@ANI) January 12, 2020 " class="align-text-top noRightClick twitterSection" data="
">Indian Navy: The developmental Light Combat Aircraft (LCA)(N) MK1 achieved another important milestone today by successfully undertaking the maiden Ski Jump take-off from INS Vikramaditya, earlier today. pic.twitter.com/XFlLm1MvrZ
— ANI (@ANI) January 12, 2020Indian Navy: The developmental Light Combat Aircraft (LCA)(N) MK1 achieved another important milestone today by successfully undertaking the maiden Ski Jump take-off from INS Vikramaditya, earlier today. pic.twitter.com/XFlLm1MvrZ
— ANI (@ANI) January 12, 2020
ಶನಿವಾರವಷ್ಟೇ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ ಮೊಟ್ಟ ಮೊದಲ ಬಾರಿಗೆ 'ತೇಜಸ್' ಯಶಸ್ವಿಯಾಗಿ ಬಂದಿಳಿದು ಭಾರತೀಯ ಯುದ್ಧ ವಿಮಾನ ಅಭಿವೃದ್ಧಿ ಕಾರ್ಯಕ್ರಮದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿತ್ತು. ಇದೀಗ ವಿಕ್ರಮಾದಿತ್ಯ ನೌಕೆಯಿಂದ ಯಶಸ್ವಿಯಾಗಿ ಟೇಕ್ ಆಫ್ ಆಗಿ ಗಮನ ಸೆಳೆದಿದೆ.
'ಐಎನ್ಎಸ್ ವಿಕ್ರಮಾದಿತ್ಯ', ದೇಶದ ಏಕೈಕ ಯುದ್ಧ ವಿಮಾನವಾಗಿದ್ದು, 'ತೇಜಸ್ ಎಂಕೆ1', ದೇಶೀಯ ನಿರ್ಮಿತ ನೌಕಾ ಆವೃತ್ತಿಯ ಲಘು ಯುದ್ಧ ವಿಮಾನವಾಗಿದೆ. ಇನ್ನು ಫೈಟರ್ ಜೆಟ್‌ಗಳಿಗೆ ಲಿಫ್ಟ್ ಒದಗಿಸಲು ವಿನ್ಯಾಸಗೊಳಿಸಲಾದ ವಿಮಾನವಾಹಕ ನೌಕೆಗಳ ಡೆಕ್‌ನಲ್ಲಿ ಮೇಲ್ಮುಖವಾಗಿ ಬಾಗಿದ ರಾಂಪ್ಗೆ ಸ್ಕೀ-ಜಂಪ್ ಎನ್ನುತ್ತಾರೆ.