ETV Bharat / bharat

ಮುಸ್ಲಿಂ ಮತದಾರರು ಮಮತಾ ಬ್ಯಾನರ್ಜಿ ಅವರ ‘ಜಾಗಿರ್’ ಅಲ್ಲ: ಒವೈಸಿ - ಮಮತಾ ಬ್ಯಾನರ್ಜಿ ವಿರುದ್ಧ ಒವೈಸಿ ಕಿಡಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಮುಸ್ಲಿಂ ಮತದಾರರು ಮಮತಾ ಬ್ಯಾನರ್ಜಿ ಅವರ ‘ಜಾಗಿರ್’ (ಆಸ್ತಿ) ಅಲ್ಲ ಎಂದು ವಾಕ್ಸಮರ ನಡೆಸಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧ ಒವೈಸಿ ಕಿಡಿ
ಮಮತಾ ಬ್ಯಾನರ್ಜಿ ವಿರುದ್ಧ ಒವೈಸಿ ಕಿಡಿ
author img

By

Published : Dec 16, 2020, 3:12 PM IST

ಹೈದರಾಬಾದ್: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ಹಂಚಿಕೊಳ್ಳಲು 'ಹೈದರಾಬಾದ್‌ನ ಪಕ್ಷ'ವೊಂದಕ್ಕೆ ಬಿಜೆಪಿ ಹಣ ನೀಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಮುಸ್ಲಿಂ ಮತದಾರರು ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲ. ನನ್ನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಇಡೀ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈ ವರೆಗೂ ಹುಟ್ಟಿಯೂ ಇಲ್ಲ, ಮುಂದೊಂದು ದಿನ ಹುಟ್ಟುವುದೂ ಇಲ್ಲ. ಮುಸ್ಲಿಂ ಮತದಾರರು ಮಮತಾ ಅವರ ಆಸ್ತಿಯಲ್ಲ. ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಮಾತುಗಳು ಆಧಾರರಹಿತವಾಗಿವೆ ಎಂದು ಅಸಮಾಧಾನ ಹೊರಹಾಕಿದರು.

ಓದಿ: ಅಪ್ನಿ ಪಕ್ಷದ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಂದೂಕುಧಾರಿ

ಮೊದಲು ಮಮತಾ ಅವರು ತಮ್ಮ ಸ್ವಂತ ಪಕ್ಷದ ಕುರಿತು ಚಿಂತಿಸಬೇಕು. ಅವರದೇ ಪಕ್ಷದ ನಾಯಕರು ಪಕ್ಷ ತೊರೆದು ಬಿಜೆಪಿಗೆ ತೆರಳುತ್ತಿದ್ದಾರೆ. ಆ ಬಗ್ಗೆ ಮೊದಲು ಯೋಚಿಸಿ. ನಮ್ಮ ಪಕ್ಷಕ್ಕೆ ಹೀಗೆ ಮಾತನಾಡುವ ಮೂಲಕ ಮಮತಾ ನಮಗೆ ಮತ ಹಾಕಿದ ಬಿಹಾರದ ಮತದಾರರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.