ETV Bharat / bharat

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ!

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಯಾವುದೇ ಹಾನಿಯಾಗಲಿಲ್ಲ.

hosp
hosp
author img

By

Published : Aug 14, 2020, 3:48 PM IST

ನವದೆಹಲಿ: ಮಧ್ಯ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 11ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡ ಕುರಿತು ಮಾಹಿತಿ ಸಿಕ್ಕಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

"11.05ಕ್ಕೆ ಎಲ್ಎನ್‌ಜೆಪಿ ಆಸ್ಪತ್ರೆಯ ಗೈನೆಸಿಕ್ ವಾರ್ಡ್‌ನ ಗೇಟ್ ನಂ.2ರಲ್ಲಿ ವಿದ್ಯುತ್ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಡಿಎಫ್‌ಎಸ್ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಆಸ್ಪತ್ರೆಗೆ ಯಾವುದೇ ಹಾನಿಯಾಗಲಿಲ್ಲ" ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ಟ್ವೀಟ್ ಮಾಡಿದ್ದಾರೆ.

ಕೆಲವು ವಿದ್ಯುತ್ ತಂತಿಗಳು ಮಳೆ ನೀರಿನ ಸಂಪರ್ಕಕ್ಕೆ ಬಂದು, ಬೆಳಿಗ್ಗೆ 11.30ಕ್ಕೆ ಸಣ್ಣಪುಟ್ಟ ಬೆಂಕಿ ಕಾಣಿಸಿಕೊಂಡಿದೆ ಎಂದು ಎಲ್‌ಎನ್‌ಜೆಪಿಯ ಅಧಿಕಾರಿಯೊಬ್ಬರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.