ETV Bharat / bharat

ಪ್ರಾಣವನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸಚಿವರಿಂದ ಸಲಾಂ - ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ಕೊರೊನಾ ಸೋಂಕಿತರಿಂದ ಒಂದು ಮೀಟರ್​ ಅಂತರವನ್ನ ಕಾಯ್ದಿರಿಸಬೇಕು. ಆದರೆ ಇದನ್ನೆಲ್ಲಾ ಬದಿಗೊತ್ತಿ, ಎಲ್ಲಾ ಅಪಾಯಗಳನ್ನು ಮೆಟ್ಟಿನಿಂತು ದೇಶದ ಗ್ರಾಮಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Ministers appreciate doctors who are fighting against COVID-19
ಪ್ರಾಣವನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸಚಿವರಿಂದ ಸಲಾಂ
author img

By

Published : Mar 17, 2020, 1:49 PM IST

Updated : Mar 17, 2020, 3:12 PM IST

ನವದೆಹಲಿ: ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿದ ಹಾಗೂ ಜಗತ್ತಿನ ಇತರ ಭಾಗಗಳಿಂದ ಭಾರತೀಯರನ್ನು ಮರಳಿ ಕರೆತರಲು ಸಹಾಯ ಮಾಡಿದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೈಲಟ್‌ಗಳು, ವಿಮಾನಯಾನ ಸಿಬ್ಬಂದಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸಚಿವರಿಂದ ಸಲಾಂ

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಸಚಿವ ಹರ್ಷವರ್ಧನ್, ಕೊರೊನಾ ಸೋಂಕಿತರಿಂದ ಒಂದು ಮೀಟರ್​ ಅಂತರವನ್ನ ಕಾಯ್ದಿರಿಸಬೇಕು. ಆದರೆ ಇದನ್ನೆಲ್ಲ ಬದಿಗೊತ್ತಿ, ಎಲ್ಲ ಅಪಾಯಗಳನ್ನು ಮೆಟ್ಟಿನಿಂತು ದೇಶದ ಗ್ರಾಮಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇದ್ರಗಳಲ್ಲಿ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಇವರನ್ನ ಹೊಗಳಲು ಮಾತುಗಳೇ ಸಾಲಲ್ಲ. ಇನ್ನು ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳೊಂದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ವಿಜ್ಞಾನಿಗಳು ಸಂಪರ್ಕದಲ್ಲಿದ್ದಾರೆ. ICMR ಮೂಲಕ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.

ಇದೇ ವಿಚಾರವಾಗಿ ಬಿಜೆಪಿ ಸಂಸದೀಯ ಪಕ್ಷದ ಸಭೆ ಬಳಿಕ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸ್​ಗಳಿಗೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೊವಿಡ್​-19 ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಎಲ್ಲ ಸುದ್ದಿ ಮಾಧ್ಯಮಗಳನ್ನು ಹೊಗಳಿದ್ದಾರೆ ಎಂದು ತಿಳಿಸಿದರು.

Last Updated : Mar 17, 2020, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.