ETV Bharat / bharat

ನಾಳೆ ರಾಷ್ಟ್ರೀಯ ತಂತ್ರಜ್ಞಾನ ದಿನ... ಈ ದಿನದ ವಿಶೇಷತೆ ಕುರಿತು ಒಂದು ಒಳನೋಟ!

ದೇಶಾದ್ಯಂತ ನಾಳೆ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆ ಮಾಡಲಾಗುತ್ತಿದ್ದು, ಈ ದಿನದ ವಿಶೇಷ ಏನು, ಯಾವಾಗಿನಿಂದ ಈ ದಿನ ಆಚರಣೆ ಮಾಡಲಾಗುತ್ತಿದೆ. ಹಾಗೂ ದೇಶ ತಂತ್ರಜ್ಞಾನದಲ್ಲಿ ಎಷ್ಟೊಂದು ಮುಂದುವರಿದಿದೆ ಎಂಬುದರ ಸಂಪೂರ್ಣ ಮಾಹಿತಿ.

National Technology Day
National Technology Day
author img

By

Published : May 10, 2020, 9:07 AM IST

Updated : May 10, 2020, 9:16 AM IST

ಹೈದರಾಬಾದ್​: ಪ್ರತಿವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 1998 ಮೇ 11ರಂದು ಪೋಖರಣ್​​ನಲ್ಲಿ ಸರಣಿ ಅಣುಬಾಂಬ್‌ ಸ್ಫೋಟದ ಯಶಸ್ವಿ ಪರೀಕ್ಷೆ, ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ 'ಹನ್ಸಾ-3' ಹೆಲಿಕಾಪ್ಟರ್​ನ ಯಶಸ್ವಿ ಹಾರಾಟ ಹಾಗೂ ಸ್ವದೇಶಿ ನಿರ್ಮಿತ ತ್ರಿಶೂಲ್‌ ಕ್ಷಿಪಣಿ ಯಶಸ್ವಿ ಉಡಾವಣೆ ನಡೆದ ಪರಿಣಾಮವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.

ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ ಘೋಷಣೆ ಮಾಡಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳು, ಎಂಜಿನಿಯರ್​ಗಳ ಅದ್ಭುತ ಸಾಧನೆ ಹಾಗೂ ಅಮೂಲ್ಯ ಕೊಡುಗೆ ಎತ್ತಿ ತೋರಿಸಲು ಈ ದಿನ ಆಚರಣೆ ಮಾಡಲಾಗುತ್ತದೆ. ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದತ್ತ ಯುವಕರನ್ನ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಭಾರತ ಈಗಾಗಲೇ ತಂತ್ರಜ್ಞಾನದಲ್ಲಿ ಅಣ್ವಸ್ತ್ರ ಪರೀಕ್ಷೆ‌, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ಅಪರಿಮಿತ ಸಾಧನೆ ಮಾಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಬಳಕೆಯಿಂದಾಗಿ ಭಾರತ ಹಲವಾರು ಸಾಧನೆ ಮಾಡಿದೆ. ಕುಷ್ಟರೋಗ, ಸಿಡುಬು, ಪೋಲಿಯೋಗಳ ನಿವಾರಣೆಯಲ್ಲೂ ಮಲೇರಿಯಾ, ಕಾಲಾ ಅಜರ್, ಕಾಲರಾ ಮತ್ತು ಟಿ.ಬಿ.ಗಳ ನಿಯಂತ್ರಣದಲ್ಲೂ ನಮ್ಮ ದೇಶ ಯಶಸ್ವಿಯಾಗಿದೆ.

COVID-19ನಲ್ಲಿ ಡಿಜಿಟಲ್ ತಂತ್ರಜ್ಞಾನ

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಂತ್ರಜ್ಞಾನ ಕಂಪನಿಗಳಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚಿನ ಬೆಂಬಲ ದೊರತಿದೆ. ವಿಶ್ವದ ಪ್ರಮುಖ 30 ಡಿಜಿಟಲ್ ತಂತ್ರಜ್ಞಾನ ತಜ್ಞರು ಒಟ್ಟುಗೂಡಿ ಮಹಾಮಾರಿ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ.

ಈಗಾಗಲೇ ಕೋವಿಡ್​-19 ವಿರುದ್ಧ ತಂತ್ರಜ್ಞಾನ ಬಳಿಕೆ ಮಾಡಿಕೊಂಡು ಹೋರಾಟ ನಡೆಸಲಾಗಿದ್ದು, ಸೋಂಕು ತಪಾಸಣೆ, ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಟೀವ್​ ಡೇವಿಸ್​ ಹಾಗೂ ಮಾಲೆಬೊನ್​ ಮ್ಯಾಟ್ಸೊಸೊ ಸಹ ಮಾಹಿತಿ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್​ ಅಧಾನಮ್​ ಸಾಂಕ್ರಾಮಿಕ ರೋಗ ಹತ್ತಿಕ್ಕುವಲ್ಲಿ ತಂತ್ರಜ್ಞಾನದ ಪಾತ್ರ ಬಹುಮುಖ್ಯ ಎಂದಿದ್ದಾರೆ. ಕೋವಿಡ್​​-19 ಗಾಗಿ ಡಿಜಿಟಲ್​​ ಹೆಲ್ತ್​ ಹಾಗೂ ಇನ್ನೋವೇಶನ್​ ಪ್ರಯತ್ನ ಪರಿಚಯಿಸಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದ್ದಾರೆ.

ಆರೋಗ್ಯ ಸೇತು ಅಪ್ಲಿಕೇಶನ್​: ಕೋವಿಡ್​​-19

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಬಳಕೆಯಿಂದ ಆರೋಗ್ಯ ಸೇತು ಆ್ಯಪ್​ ಬಳಕೆ ಮಾಡಲಾಗುತ್ತಿದೆ. 11 ಭಾಷೆಗಳಲ್ಲಿ ಈ ಆ್ಯಪ್​ ಲಭ್ಯವಿದ್ದು, ಭಾರತೀಯ 10 ಭಾಷೆಗಳಲ್ಲೂ ಮಾಹಿತಿ ಲಭ್ಯವಾಗುತ್ತದೆ.

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಇದರಿಂದ ಯಾವುದೇ ಕೋವಿಡ್ -19 ಪಾಸಿಟಿವ್ ರೋಗಿಯೊಂದಿಗೆ ಹತ್ತಿರದ ಜನರನ್ನು ಸೂಚಿಸಲು ಸಹಾಯವಾಗುತ್ತದೆ. ಇದರಲ್ಲಿ ವಯಸ್ಸು, ಲಿಂಗ, ಹೆಸರು, ಆರೋಗ್ಯ ಸ್ಥಿತಿಯ ಮಾಹಿತಿ ಒಳಗೊಂಡಿದೆ ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಬಗ್ಗೆ ಮಾಹಿತಿ ಕೇಳುತ್ತದೆ. ಕೋವಿಡ್​​-19 ಮಹಾಮಾರಿ ವೇಳೆ ದೂರ ಶಿಕ್ಷಣ,ಆನ್​ಲೈನ್​ ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ.

ಕೋವಿಡ್​-19: ಮನೆಯಿಂದ ಕೆಲಸ

ಮಹಾಮಾರಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ತಂತ್ರಜ್ಞಾನ ಇದನ್ನ ಸಾಧ್ಯವಾಗಿಸಿದೆ. ಸಾವಿರಾರು ಕಿಲೋ ಮೀಟರ್​ ದೂರದಲ್ಲಿರುವ ಕಂಪನಿಗೆ ನೀವು ಹೋಗುವ ಬದಲು ಮನೆಯಲ್ಲೇ ಕುಳಿತುಕೊಂಡು ಸುಲಭವಾಗಿ ಕೆಲಸ ಮಾಡಬಹುದಾಗಿದೆ.

ಕೋವಿಡ್​​-19: ಶಿಕ್ಷಣದಲ್ಲಿ ಡಿಜಿಟಲ್​ ತಂತ್ರಜ್ಞಾನ

ಶಿಕ್ಷಣ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಬಳಕೆಯಿಂದಾಗಿ ಭಾರತ ಹಲವಾರು ಸಾಧನೆ ಮಾಡಿದೆ. ದೇಶಾದ್ಯಂತ ಕೋವಿಡ್​ ಅಬ್ಬರ ಜೋರಾಗಿರುವ ಕಾರಣ ಲಕ್ಷಾಂತರ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಶಾಲಾ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳಲ್ಲಿ ಹಲವಾರು ರೀತಿಯ ತರಗತಿ ಇದೀಗ ಆನ್​ಲೈನ್​ ವಿಡಿಯೋ ಕಾಲ್​ ಮೂಲಕವೇ ನಡೆಯುತ್ತಿವೆ.

Last Updated : May 10, 2020, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.