ಅಸ್ಸಾಂ: ದೇಶಾದ್ಯಂತ ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಯುತ್ತಿದೆ. ಆದ್ರೆ, ಇಲ್ಲೊಂದೆಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ತಮ್ಮ ಫೇಸ್ಬುಕ್ನಲ್ಲಿ ಖಾತೆಯಲ್ಲಿ ಕೊರೊನಾ ಬಗ್ಗೆ ಮನ ಬಂದಂತೆ ವಿವಾದಿತ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಸಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಸ್ಸಾಂನ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್)ನ ಶಾಸಕ ಅಮೀನುಲ್ ಇಸ್ಲಾಂ ಬಂಧಿತ ವ್ಯಕ್ತಿ. ಬೇಜವಾಬ್ದಾರಿಯುತವಾಗಿ ಕೊರೊನಾ ಬಗ್ಗೆ ಹೇಳಿಕೆ ನೀಡುವುದು, ಜೊತೆಗೆ ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ ಹಾಕಿ ಜನರ ದಾರಿ ತಪ್ಪಿಸುತ್ತಿದ್ದ ಗುರುತರ ಆರೋಪ ಇವರ ಮೇಲಿದೆ.
ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಮರ್ಕಜ್ ತಬ್ಲಿಘಿ ಜಮಾತ್ನಲ್ಲಿ ಮುಸ್ಲಿಮರು ಪಾಲ್ಗೊಂಡ ಬಳಿಕ ಪರಿಸ್ಥಿತಿಯನ್ನು ಕೋಮು ಸಂಘರ್ಷಕ್ಕೆ ಪರಿವರ್ತಿಸಲಾಗುತ್ತಿದೆ. ಕ್ವಾರಂಟೈನ್ನಲ್ಲಿರುವ ಮುಸ್ಲಿಂ ವ್ಯಕ್ತಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಅವರು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇವರು ಕಮೆಂಟ್ ಮಾಡಿದ್ದರು.
ಜತೆಗೆ ಅಸ್ಸಾಂ ಸರ್ಕಾರ ಮಸ್ಲಿಮರ ವಿರುದ್ಧ ಕೊರೊನಾ ವೈರಸ್ ಎಂಬ ಸಂಚು ರೂಪಿಸುತ್ತಿದೆ ಎಂದಿದ್ದರು.