ಮಹಾರಾಷ್ಟ್ರ: ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ "ಥಿಂಕ್ ಟ್ಯಾಂಕ್" ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ.
ಶಿಕ್ಷಣ ಸಚಿವ ವರ್ಷ ಗಾಯಕ್ವಾಡ್ ಅವರು ಈ ಬಗ್ಗೆ ಚಿಂತನೆ ಮಾಡಿದ್ದು, ಥಿಂಕ್ ಟ್ಯಾಂಕ್‌ನಲ್ಲಿ ವಿವಿಧ ಕ್ಷೇತ್ರಗಳ ವೃತ್ತಿಪರರು, ಚುನಾಯಿತ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ಶಿಕ್ಷಣ ನೀತಿಗಳನ್ನು ರೂಪಿಸುವಲ್ಲಿ ತೊಡಗಿರುವ ನಿವೃತ್ತ ಅಧಿಕಾರಿಗಳು, ಎನ್‌ಜಿಒಗಳು ಮತ್ತು ಮಾಧ್ಯಮಗಳು ಒಳಗೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಮುಂದಿನ ವಾರದಿಂದ ಥಿಂಕ್ ಟ್ಯಾಂಕ್ ಯೋಜನೆ ಬಗ್ಗೆ ಸಂವಾದವನ್ನು ಪ್ರಾರಂಭಿಸಲು ಮುಂದಾಗುತ್ತೇನೆ. ವೈಯಕ್ತಿಕ ಸಂವಾದದ ಮೂಲಕ ನಾನು ಅವರ ಅನುಭವಗಳನ್ನು ತಿಳಿದುಕೊಳ್ಳುತ್ತೇನೆ. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ರಚನಾತ್ಮಕವಾದದ್ದನ್ನು ಅನುಷ್ಠಾನ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಉದ್ಧವ್ ಠಾಕ್ರೆ ನೇತೃತ್ವದ ಕ್ಯಾಬಿನೆಟ್ಗೆ ಸೇರ್ಪಡೆಯಾದ ನಂತರ ಕಾಂಗ್ರೆಸ್ನ ಗಾಯಕ್ವಾಡ್ ಅವರಿಗೆ ಈ ತಿಂಗಳ ಆರಂಭದಲ್ಲಿ ಇಲಾಖೆಯ ಉಸ್ತುವಾರಿ ನೀಡಲಾಗಿದೆ.