ETV Bharat / bharat

ದ್ವಿಪಕ್ಷೀಯ ಸಂಬಂಧ ಜಂಟಿಯಾಗಿ ಪರಿಶೀಲಿಸಲು ಎದುರು ನೋಡುತ್ತಿದ್ದೇವೆ: ರಾಜಪಕ್ಸೆಗೆ ಮೋದಿ ಪ್ರತಿಕ್ರಿಯೆ - ಮಹಿಂದಾ ರಾಜಪಕ್ಸೆ ಮೋದಿ ವರ್ಚುವಲ್ ಸಂಭಾಷಣೆ

ಕೋವಿಡ್ ನಂತರದ ದಿನಗಳಲ್ಲಿ ತಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಮಾರ್ಗಗಳನ್ನು ಉಭಯ ದೇಶಗಳು ಅನ್ವೇಷಿಸಬೇಕು ಎಂದು ಪ್ರಧಾನಿ ಮೋದಿ, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ.

PM Modi to Mahinda Rajapaksa
ಮಹಿಂದಾ ರಾಜಪಕ್ಸೆ ಮೋದಿ ಪ್ರತಿಕ್ರಿಯೆ
author img

By

Published : Sep 24, 2020, 12:26 PM IST

ನವದೆಹಲಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗಿನ ವರ್ಚುವಲ್ ಸಂಭಾಷಣೆಗೆ ಮುನ್ನ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಜಂಟಿಯಾಗಿ ಪರಿಶೀಲಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

‘ಸೆಪ್ಟೆಂಬರ್ 26ರಂದು ನಡೆಯಲಿರುವ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ. ರಾಜಕೀಯ, ಆರ್ಥಿಕತೆ, ರಕ್ಷಣಾ, ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳಿಂದ ಹಿಡಿದು ನಮ್ಮ ರಾಷ್ಟ್ರಗಳ ನಡುವಿನ ಬಹುಮುಖಿ ದ್ವಿಪಕ್ಷೀಯ ಸಂಬಂಧವನ್ನು ಪರಿಶೀಲಿಸಲು ನಾವು ನಿರೀಕ್ಷಿಸುತ್ತೇವೆ’ ಎಂದು ಮಹಿಂದಾ ರಾಜಪಕ್ಸೆ ಟ್ವೀಟ್​ ಮಾಡಿದ್ದರು.

ಶ್ರೀಲಂಕಾ ಪ್ರಧಾನಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಮೋದಿ, ‘ಮಹಿಂದಾ ರಾಜಪಕ್ಸೆ ಅವರಿಗೆ ಧನ್ಯವಾದಗಳು. ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಜಂಟಿಯಾಗಿ ಪರಿಶೀಲಿಸಲು ನಾನು ಸಹ ಎದುರು ನೋಡುತ್ತಿದ್ದೇನೆ. ಕೋವಿಡ್ ನಂತರದ ದಿನಗಳಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಮಾರ್ಗಗಳನ್ನು ನಾವು ಅನ್ವೇಷಿಸಬೇಕು’ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.