ಮುಂಬೈ (ಮಹಾರಾಷ್ಟ್ರ): ಲಾಕ್‌ಡೌನ್‌ನಿಂದಾಗಿ ಮಾಲಿನ್ಯ ಕಡಿಮೆಯಾಗಿರುವುದರಿಂದ ಮುಂಬೈನ ಹಳ್ಳ ಕೊಳ್ಳಗಳಲ್ಲಿ ಫ್ಲೆಮಿಂಗೊ ಹಕ್ಕಿಗಳ ಚಿಲಿಪಿಲಿ ಕಾಣುತ್ತಿದೆ.
ಪರಿಸರದಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದಾಗಿ ದೇಶದ ಹಣಕಾಸು ರಾಜಧಾನಿಯಲ್ಲಿ ಫ್ಲೆಮಿಂಗೊಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಏಪ್ರಿಲ್ ಮೊದಲ ವಾರದಿಂದಲೇ ಈ ರಾಜಹಂಸಗಳ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿನ ಐರೋಲಿ ಮತ್ತು ಸೀ ವುಡ್ಸ್ ಎನ್‌ಆರ್‌ಐ ಸಂಕೀರ್ಣದ ಪ್ರದೇಶಗಳಲ್ಲಿ ಅಪರೂಪದ ಪಕ್ಷಿ ಸಂಕುಲ ಕಾಣಸಿಗುತ್ತಿದೆ.
ವಾಯು ಮಲಿನ್ಯ, ಶಬ್ಧ ಮಾಲಿನ್ಯ ಮತ್ತು ಜಲ ಮಾಲಿನ್ಯ ಕಡಿಮೆಯಾಗಿರುವುದರಿಂದ ಪ್ರಸ್ತುತ ವಾತಾವರಣ ಫ್ಲೆಮಿಂಗೋಗಳಿಗೆ ಸೂಕ್ತವಾಗಿವೆ.