ಕಾಸ್‌ಗಂಜ್ (ಉತ್ತರ ಪ್ರದೇಶ): ಕಾಸ್‌ಗಂಜ್‌ನಲ್ಲಿ ನಡೆಸುತ್ತಿದ್ದ ಅಕ್ರಮ ಮದ್ಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಮೇಲೆಯೇ ದಂಧೆಕೋರರು ಮರುದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಾನ್ಸ್ಟೇಬಲ್ ದೇವೇಂದ್ರ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮದ್ಯ ಮಾಫಿಯಾ ಕಿಂಗ್‌ಪಿನ್ ಮೋತಿ ಧೀಮರ್‌ಗೆ ವಾರಂಟ್ ಸಲ್ಲಿಸಲು ಸಿಧ್‌ಪುರದ ಪೊಲೀಸ್ ತಂಡ ನಾಗಲಾ ಧೀಮರ್ ಗ್ರಾಮಕ್ಕೆ ತೆರಳಿದೆ. ಈ ವೇಳೆ ದಾಳಿ ನಡೆಸಿದ ಮಾಫಿಯಾ ತಂಡವು ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಮತ್ತು ಕಾನ್ಸ್ಟೇಬಲ್ ದೇವೇಂದ್ರ ಸಿಂಗ್ಗೆ ಈಟಿಯಿಂದ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಇದನ್ನು ಓದಿ: ಕೃಷಿ ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ತಿದ್ದುಪಡಿಗೆ ಸಿದ್ದ: ಪ್ರಧಾನಿ ಮೋದಿ
ಘಟನೆಯ ನಂತರ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಅಶೋಕ್ ಕುಮಾರ್ ಎಂಬುವರು ಅರಣ್ಯ ಭಾಗದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಹಳ್ಳದಲ್ಲಿ ಬಿದ್ದಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಸ್ವಲ್ಪ ದೂರದಲ್ಲಿ, ದೇವೇಂದ್ರ ಹೊಲವೊಂದರಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಲಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಅವರನ್ನು ಸಿಧ್‌ಪುರ ಪಿಎಚ್‌ಸಿಗೆ ದಾಖಲಿಸಲಾಗಿದೆ. ಆದರೆ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.