ETV Bharat / bharat

ಕೊರೊನಾ ಸೋಂಕಿತರಿಗೆ 5 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ಆದೇಶ ವಾಪಸ್‌‌ - ಸಿಎಂ ಅರವಿಂದ್ ಕೇಜ್ರಿವಾಲ್‌

ದೆಹಲಿಯಲ್ಲಿ ಕೋವಿಡ್‌-19 ರೋಗಿಗಳಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಎಂಬ‌ ಆದೇಶವನ್ನು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ವಾಪಸ್‌ ಪಡೆದಿದ್ದಾರೆ. ನಿನ್ನೆ ಹೊರಡಿಸಿದ್ದ ಈ ಆದೇಶಕ್ಕೆ ಸಿಎಂ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

l-g-anil-baijal-withdraws-5-day-institutional-quarantine-order
ಕೊರೊನಾ ಸೋಂಕಿತರಿಗೆ 5 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್;‌ ಆದೇಶ ವಾಪಸ್‌ ಪಡೆದ ಲೆಫ್ಟಿನೆಂಟ್‌ ಗವರ್ನರ್‌
author img

By

Published : Jun 20, 2020, 8:03 PM IST

ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ಕೋವಿಡ್‌-19 ರೋಗಿಗಳಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಆದೇಶವನ್ನು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ವಾಪಸ್‌ ಪಡೆದಿದ್ದಾರೆ.

  • Regarding institutional isolation, only those COVID positive cases which do not require hospitalisation on clinical assessment & do not have adequate facilities for home isolation would be required to undergo institutional isolation.

    — LG Delhi (@LtGovDelhi) June 20, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್‌ ಮಾಡಿರುವ ಲೆಫ್ಟಿನೆಂಟ್‌ ಗವರ್ನರ್‌‌, ಕೋವಿಡ್‌-19 ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಹೋಮ್‌ ಐಸೊಲೇಷನ್‌ನಲ್ಲಿ ಸೌಲಭ್ಯಗಳು ಇಲ್ಲದವರು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಪ್ರತಿಕ್ರಿಯಿಸಿ, ಲೆಫ್ಟಿನೆಂಟ್‌ ಗವರ್ನರ್‌ ಆದೇಶ ಹಿಂಪಡೆದಿರುವುದರಿಂದ ಕೋವಿಡ್‌-19 ರೋಗಿಗಳಿಗೆ ಹೋಮ್‌ ಐಸೊಲೇಷನ್‌ ಮುಂದುವರಿಯಲಿದೆ. ಆದೇಶ ಹಿಂಪಡೆದಿದ್ದಕ್ಕೆ ಅನಿಲ್‌ ಬೈಜಾಲ್‌ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಕೊರೊನಾ ಸೋಂಕಿತರನ್ನು ಕಡ್ಡಾಯವಾಗಿ 5 ದಿನ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಎಂಬ ಆದೇಶವನ್ನು ಅನಿಲ್‌ ಬೈಜಾಲ್‌ ನೀಡಿದ್ದರು. ಇದಕ್ಕೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಪ್ರತ್ಯೇಕವಾದ ಕ್ವಾರಂಟೈನ್‌ ಯಾಕೆ ಎಂದು ಪ್ರಶ್ನಿಸಿತ್ತು. ಅಲ್ಲದೆ, ಲೆಫ್ಟಿನೆಂಟ್‌ ಗವರ್ನರ್‌ ಅವರ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.