ETV Bharat / bharat

ಕೊಂಕಣ್​ ರೈಲ್ವೆ ಸುರಂಗ ಮಾರ್ಗ ಕುಸಿತ : ರೈಲು ಸಂಚಾರದಲ್ಲಿ ಬದಲಾವಣೆ - ಕೊಂಕಣ್​ ರೈಲ್ವೆ ಮಾರ್ಗದಲ್ಲಿ ಭೂಕುಸಿತ

ಕೊಂಕಣ್​ ರೈಲ್ವೆಯ ಸುರಂಗ ಮಾರ್ಗದ ಭೂ ಕುಸಿತ ಸಂಭವಿಸಿದ್ದು, ದುರಸ್ತಿ ಕಾರ್ಯ ಮುಂದುವರೆದಿದೆ. ಗೋವಾ ಬಳಿ ಈ ಘಟನೆ ನಡೆದಿದೆ.

Konkan railway tunnel wall collapsed inside the tunnel
ಕೊಂಕಣ್​ ರೈಲ್ವೆಯ ಸುರಂಗ ಮಾರ್ಗ ಕುಸಿತ
author img

By

Published : Aug 11, 2020, 1:31 PM IST

ಮುಂಬೈ : ಕೊಂಕಣ್​ ರೈಲ್ವೆ ಮಾರ್ಗದ ಪೆಡ್ನೆ ( ಗೋವಾ) ಬಳಿ ಸುರಂಗ ಕುಸಿತದಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಈ ವರ್ಷದ ಮಾನ್ಸೂನ್​ ಅವಧಿಯ ಮೊದಲ ಮತ್ತು ದೊಡ್ಡ ದುರಂತ ಎಂದು ಇದನ್ನು ಪರಿಗಣಿಸಲಾಗಿದೆ. ರೈಲ್ವೆ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದೆ.

ಘಟನೆ ಬಳಿಕ ರೈಲು ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ. ಎರ್ನಾಕುಲಂ- ಹಜ್ರತ್​ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಮಡಗಾಂವ್​- ಲೊಂಡಾ- ಮಿರಾಜ್ ಪುಣೆ - ಪನವೆಲ್ -ಕಲ್ಯಾಣ್ ಮಾರ್ಗವಾಗಿ ಸಂಚರಿಸಲಿದೆ.

ಲೋಕಮಾನ್ಯ ತಿಲಕ್ - ತಿರುವನಂತಪುರಂ ಸೆಂಟ್ರಲ್​ ​ಎಕ್ಸ್‌ಪ್ರೆಸ್ ರೈಲು ಮಡಗಾಂವ್​- ಲೊಂಡಾ- ಮಿರಾಜ್- ಪುಣೆ- ಪನವೆಲ್​ ಮಾರ್ಗವಾಗಿ ತೆರಳಲಿದೆ. ನವದೆಹಲಿ- ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್​ಪ್ರೆಸ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಪನವೆಲ್-ಪುಣೆ-ಮಿರಾಜ್​- ಲೊಂಡಾ-ಮಡಗಾಂವ್​ ಮಾರ್ಗವಾಗಿ ಸಂಚರಿಸಲಿದೆ.

ಇನ್ನು, ಹಜ್ರತ್​​ ನಿಜಾಮುದ್ದೀನ್-ಎರ್ನಾಕುಲಂ-ಹಜ್ರತ್​ ನಿಜಾಮುದ್ದೀನ್ ವಾರದ ಡುರಾಂಟೊ ಎಕ್ಸ್‌ಪ್ರೆಸ್ ವಿಶೇಷ ರೈಲು ( ಎರಡು ಟ್ರಿಪ್​​ಗಳು) ಪುಣೆ -ಲೊಂಡಾ-ಮಡಗಾಂವ್​ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.