ETV Bharat / bharat

ವರ್ಷಕ್ಕೆ 8 ಕೋಟಿ ರೂ. ಸಂಪಾದನೆ: ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ಕೋಮಲ್​ ಸಿಂಗ್​... ಯಾರಿದು!?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೋಮಲ್​ ಸಿಂಗ್​ ಹೆಸರು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಆಕೆ ಯಾರು ಎಂಬುದರ ಮಾಹಿತಿ ಇಲ್ಲಿದೆ.

author img

By

Published : Oct 23, 2020, 8:27 PM IST

komal singh
komal singh

ಪಾಟ್ನಾ: ಬಿಹಾರ ಚುನಾವಣಾ ಕಣ ರಂಗೇರಿದ್ದು, ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಮತದಾರರ ಮನ ಒಲೈಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಕೋಮಲ್​ ಸಿಂಗ್​ ಹೆಸರು ಹೆಚ್ಚಿಗೆ ಚರ್ಚೆಗೊಳಗಾಗಿದ್ದಾರೆ.

ಹೆಸರು ಕೋಮಲ​ ಸಿಂಗ್​, ವಯಸ್ಸಯ ಕೇವಲ 27 ವರ್ಷ. ತಂದೆ ಎಂಎಲ್​​ಸಿ, ತಾಯಿ ಸಂಸದೆ. ವಾರ್ಷಿಕ ಆದಾಯ 7.94 ಕೋಟಿ, ಸಾಲ 30 ಲಕ್ಷ. ಈ ಎಲ್ಲ ವಿವರ ಚುನಾವಣೆ ಎದುರಿಸಲು ಕಣಕ್ಕಿಳಿದಿರುವ ಕೋಮಲ್​ ಸಿಂಗ್​​ ಅವರದ್ದು, ಈ ಸಲ ಎಲ್​​ಜೆಪಿಯಿಂದ ಟಿಕೆಟ್​ ಪಡೆದು ಮುಜಾಫರ್​​​ಪುರ್​ ಜಿಲ್ಲೆಯ ಗಾಯಗಟ್​​ನಿಂದ ಸ್ಪರ್ಧೆಗಿಳಿದಿದ್ದಾರೆ.

komal singh
ಬಿಹಾರ ಚುನಾವಣೆಯಲ್ಲಿ ಕೋಮಲ್​ ಸಿಂಗ್​​​

ಇವರ ಇಷ್ಟೊಂದು ಚರ್ಚೆಗೆ ಬರಲು ಕಾರಣವಾಗಿದ್ದು, ಅವರ ವಯಸ್ಸು ಹಾಗೂ ಗಳಿಕೆಯಲ್ಲಿ ವಿಭಿನ್ನತೆ ಕಂಡು ಬಂದಿರುವುದಕ್ಕಾಗಿ. ಕೋಮಲ್​ ಅವರ ತಂದೆ ಜೆಡಿಯು ಕೋಟಾದಲ್ಲಿ ಎಂಎಲ್​ಸಿ ಆಗಿದ್ದರೆ, ತಾಯಿ ವೀಣಾ ದೇವಿ ಎಲ್​ಜೆಪಿ ಸಂಸದರಾಗಿದ್ದಾರೆ.

komal singh
ಎಲ್​ಜೆಪಿ ಪಕ್ಷದಿಂದ ಕಣಕ್ಕಿಳಿದ ಕೋಮಲ್​

ಕೋಮಲ್​ ಸಿಂಗ್​ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್​ ಪ್ರಕಾರ ಅವರು ಎಂಬಿಎ ಪದವಿ ಪಡೆದುಕೊಂಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಳದ ಹೊರತಾಗಿ ಅವರು ಇತರ ಆದಾಯದ ಮೂಲ ಹೊಂದಿದ್ದು, ಅಪಾರ್ಟ್​​ಮೆಂಟ್​ಗಳ ಬಾಡಿಗೆ, ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ.

komal singh
ಕುಟುಂಬದೊಂದಿಗೆ ಕೋಮಲ್​ ಸಿಂಗ್​​

ಜೆಡಿಯು ಅಭ್ಯರ್ಥಿ ಮಹೇಶ್ವರ್​ ಯಾದವ್ ವಿರುದ್ಧ ಕೋಮಲ್​ ಸ್ಪರ್ಧೆ ಮಾಡಿದ್ದು, 2015ರಲ್ಲಿ ಇವರು ಆರ್​ಜೆಡಿಯಿಂದ ಸ್ಪರ್ಧೆ ಮಾಡಿದ್ದರು. ಆದರೆ, ಇದೀಗ ಜೆಡಿಯು ಸೇರಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.