ಚೆನ್ನೈ (ತಮಿಳುನಾಡು): ಯುಎಸ್ನ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಸಾಧನೆ ಬಗ್ಗೆ ಅವರ ಚಿಕ್ಕಮ್ಮ ಸರಳಾ ಗೋಪಾಲನ್ ಹರ್ಷ ವ್ಯಕ್ತಪಡಿಸಿದ್ದಾರೆ.
ನಾನು ವೈದ್ಯೆಯಾಗಿ ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದೆ. ಕಮಲಾ ಅವರು ಚಂಡೀಗಢ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಬಾರಿ ನಮ್ಮನ್ನು ಭೇಟಿ ಮಾಡಿದ್ದಾರೆ. ನಾವು ಅವರನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇವೆ. ತನಗೆ ಅನಿಸಿದ್ದನ್ನು ಆಕೆ ಸಾಧಿಸಿಯೇ ತೀರುವ ಛಲಗಾರ್ತಿಯಾಗಿದ್ದಳು ಎಂದು ಸರಳಾ ಹೇಳಿದ್ದಾರೆ.
ಸರಳಾ ಗೋಪಾಲನ್ ಚೆನ್ನೈ ಮೂಲದ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಅವರ ತಂಗಿ. ಶ್ಯಾಮಲಾ ಅವರು ಪ್ರಮುಖ ಕ್ಯಾನ್ಸರ್ ಸಂಶೋಧಕರು ಮತ್ತು ಕಾರ್ಯಕರ್ತರಾಗಿದ್ದರು.
ಕಮಲಾ ಹ್ಯಾರಿಸ್ ಸಾಧನೆಯ ಕುರಿತು ಕುಟುಂಬಕ್ಕೆ ಸಂತೋಷವಾಗಿದೆ. ಭಾರತೀಯ-ಅಮೆರಿಕನ್ ಆಗಿ ಯುಎಸ್ನ ಮೊದಲ ಮಹಿಳಾ ಉಪಾಧ್ಯಕ್ಷೆ ಸ್ಥಾನಕ್ಕೇರುತ್ತಿರುವುದಕ್ಕೆ ಕಮಲಾ ಹ್ಯಾರಿಸ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.