ಜಬಲ್ಪುರ್ (ಮಧ್ಯಪ್ರದೇಶ): ಕೋವಿಡ್-19 ರೋಗಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮತ್ತು ಕರ್ತವ್ಯದಲ್ಲಿದ್ದ ನಾಲ್ವರು ಗಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ.
"ಪ್ರಕರಣದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ. ವ್ಯಕ್ತಿಯನ್ನು ಬಂಧಿಸಲು ನಾವು ನಮ್ಮ ಕಡೆಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಜನರು ಎಚ್ಚರಿಕೆ ವಹಿಸಿ, ಏನಾದರೂ ಸುಳಿವು ಸಿಕ್ಕರೆ ನಮಗೆ ತಿಳಿಸುವಂತೆ ವಿನಂತಿಸುತ್ತೇವೆ" ಎಂದು ಜಬಲ್ಪುರ ಡಿಸಿ ಭರತ್ ಯಾದವ್ ಹೇಳಿದರು.
ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಎಲ್ಲಿದ್ದಾನೆ ಎಂಬ ಮಾಹಿತಿ ನೀಡಿದವರಿಗೆ ಮಧ್ಯಪ್ರದೇಶ ಪೊಲೀಸರು 50,000 ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಪರಾರಿಯಾಗಿರುವ ರೋಗಿಯನ್ನು ಜಾವೇದ್ ಖಾನ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜಾವೇದ್ ಖಾನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.