ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ 3,000 ಕೋಟಿ ರೂ.ಗಳ ಇ-ಟೆಂಡರ್ ಹಗರಣ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆಯ ಭಾಗವಾಗಿ ಭೋಪಾಲ್ ಮತ್ತು ಹೈದರಾಬಾದ್‌ನ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ.
ದಾಳಿ ವೇಳೆ ಐಟಿ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ತೆರಿಗೆ ವಂಚನೆಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 21 ರಂದು ಮಧ್ಯಪ್ರದೇಶದ 3,000 ಕೋಟಿ ರೂ.ಗಳ ಇ-ಟೆಂಡರ್ ರಿಗ್ಗಿಂಗ್ ದಂಧೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಬ್ಬರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಮಂಟೇನಾ ಕನ್ಸ್ಟ್ರಕ್ಷನ್ಸ್ನ ಸ್ಥಾಪಕ ಮತ್ತು ಅಧ್ಯಕ್ಷ ಶ್ರೀನಿವಾಸ್ ರಾಜು ಮಂತೇನಾ ಮತ್ತು ಅವರ ಸಹವರ್ತಿ ಆರ್ನಿ ಇನ್ಫ್ರಾ ಮತ್ತು ಆದಿತ್ಯ ತ್ರಿಪಾಠಿಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣ: ಆರೋಪಿ ಇಕ್ಬಾಲ್ ಸಿಂಗ್ ಬಂಧನ