ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶವು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 28 ನೇ ವರ್ಷಾಚರಣೆ ಆಚರಿಸುತ್ತಿರುವುದರಿಂದ ಭಾರತದೊಂದಿಗೆ ತನ್ನ ಆಳವಾದ ಸ್ನೇಹವನ್ನು ಬಲಪಡಿಸುವುದಾಗಿ ಹೇಳಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. "ಭಾರತ ಮತ್ತು ಇಸ್ರೇಲ್ ನಡುವೆ ಸಂಬಂಧ ಬೆಳೆದು ಇಂದಿಗೆ 28 ವರ್ಷ ಕಳೆದಿದೆ. ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಸ್ರೇಲ್ ಮತ್ತು ಭಾರತದ ನಡುವೆ ಆಳವಾದ ಸ್ನೇಹವು ಹೊರಹೊಮ್ಮಿದೆ. ಅದು ನಮ್ಮ ಅನೇಕ ಸಹಯೋಗಗಳಲ್ಲಿ ಸ್ಪಷ್ಟವಾಗಿದೆ. ಈ ಮಹತ್ವದ ಸ್ನೇಹವನ್ನು ನಾವು ಬಲಪಡಿಸುವುದನ್ನು ಮುಂದುವರಿಸುತ್ತೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
1950 ರಲ್ಲಿ ಭಾರತವು ಅಧಿಕೃತವಾಗಿ ಗುರುತಿಸಿದರೂ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸದಿದ್ದಾಗ ಇಸ್ರೇಲ್ ಮುಂಬೈನಲ್ಲಿ ದೂತವಾಸವನ್ನು ತೆರೆಯಿತು. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1992 ರ ಜ. 29 ರಂದು ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಲು ನಿರ್ಧರಿಸಿತ್ತು. ಅದನ್ನು ಈಗ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿದೆ ಎಂದಿದ್ದಾರೆ ನೆತನ್ಯಾಹು.