ETV Bharat / bharat

ಟಿಕ್​ಟಾಕ್​ ಮಿಸ್​ ಮಾಡ್ಕೊಂಡೋರ್ಗೆ ಇನ್‌ಸ್ಟಾಗ್ರಾಂ ಕಡೆಯಿಂದ ಗುಡ್​ ನ್ಯೂಸ್​! ಈ ಹೊಸ ಫೀಚರ್​ ಏನ್​ ಗೊತ್ತಾ?

author img

By

Published : Jul 8, 2020, 6:56 PM IST

ಜಾಗತಿಕವಾಗಿ ನೂರು ಕೋಟಿ ಬಳಕೆದಾರರಿರುವ ಇನ್‌ಸ್ಟಾಗ್ರಾಂ, ಹೊಸ ಫೀಚರ್​ ಒಂದನ್ನು ತರುತ್ತಿದೆ. ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಆದ ಬಳಿಕ ಅದಕ್ಕೆ ಬದಲಿ ಆಯ್ಕೆಗಾಗಿ ಹಾತೊರೆಯುತ್ತಿರುವವರು ಈ ಹೊಸ ಫೀಚರ್​ ನೋಡಿ ಫುಲ್​ ಖುಷ್​ ಆಗೋದು ಪಕ್ಕಾ. ಇದು ನಿಮ್ಗೆ ಟಿಕ್​ಟಾಕ್​ನಲ್ಲಿದ್ದಂತೆಯೇ ವಿಡಿಯೋ ರೆಕಾರ್ಡ್​ ಮಾಡಿ, ಅದಕ್ಕೆ ಬೇರೆ ಬೇರೆ ಎಫೆಕ್ಟ್​ ಕೊಟ್ಟು ನಿಮ್ಮ ಫಾಲೋವರ್​ಗಳಿಗೆ ಶೇರ್​ ಮಾಡಲು ಅವಕಾಶ ನೀಡುತ್ತದೆ.

Instagram Reels
ಇನ್‌ಸ್ಟಾಗ್ರಾಂ

ನವದೆಹಲಿ: ಭಾರತದಲ್ಲಿ ಟಿಕ್‌ಟಾಕ್ ಆ್ಯಪ್​ ನಿಷೇಧಿಸಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಎಷ್ಟೋ ಅಪ್ಪಟ ನಾಟಿ ಪ್ರತಿಭೆಗಳು ಇದಕ್ಕೆ ಬದಲಿ ಆ್ಯಪ್​ಗಳಿಲ್ಲದೆ ನಿದ್ದೆಗೆಟ್ಟಿದ್ದಾರೆ. ಆದ್ರೆ ಟಿಕ್​ಟಾಕ್​ಗೆ ಹೊಂದಿಕೊಂಡಿದ್ದವರಿಗೆ​ ಇನ್‌ಸ್ಟಾಗ್ರಾಂ ಒಂದು ಗುಡ್​ ನ್ಯೂಸ್​ ಕೊಟ್ಟಿದೆ.

ಟಿಕ್​ಟಾಕ್​ಗೆ ಬದಲಿ ಆ್ಯಪ್​ಗಳ ಹುಡುಕಾಟದ ಸಂದರ್ಭದಲ್ಲಿ, ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಭಾರತದಲ್ಲಿ ಪ್ರಯೋಗವೊಂದಕ್ಕೆ ಮುಂದಾಗಿದೆ. ಇನ್‌ಸ್ಟಾಗ್ರಾಂ ಬಳಕೆದಾರರು 15 ಸೆಕೆಂಡ್​ಗಳ ಮಲ್ಟಿ-ಕ್ಲಿಪ್ ವಿಡಿಯೋವನ್ನು ರೆಕಾರ್ಡ್ ಮಾಡಿ, ಎಡಿಟ್​ ಮಾಡಲು ಮತ್ತು ಅದನ್ನು ಶೇರ್​ ಮಾಡಲು ಆಗುವಂತಹ 'ರೀಲ್ಸ್​' ಅನ್ನೋ ಫೀಚರ್​ ಅನ್ನು ಪರೀಕ್ಷಾರ್ಥವಾಗಿ ಭಾರತದಲ್ಲಿ ತರುತ್ತಿದೆ.

Instagram Reels
ಈ ಆಯ್ಕೆಗಳು ನಿಮ್ಗೆ ಲಭ್ಯ

ಒಟ್ಟಾರೆ ವಿಡಿಯೋ ಬಳಕೆ ಹೆಚ್ಚಳ ಮತ್ತು ಭಾರತದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮೂರನೇ ಒಂದು ಭಾಗದಷ್ಟು ವಿಡಿಯೋ ಪೋಸ್ಟ್‌ಗಳು ಇರುವುದರಿಂದ, ದೇಶದಲ್ಲಿ ವ್ಯಕ್ತಿಗಳ ಅಭಿವ್ಯಕ್ತಿ ಬಿಚ್ಚಿಡುವಲ್ಲಿ ಇನ್‌ಸ್ಟಾಗ್ರಾಂ ಪಾತ್ರ ದೊಡ್ಡದಿದೆ ಎಂದು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಿಳಿಸಿದ್ದಾರೆ.

'ರೀಲ್ಸ್​'ನೊಂದಿಗೆ, ನಾವು ಬಳಕೆದಾರರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮನರಂಜನೆಯ ಫೀಚರ್​ಅನ್ನು ಅನಾವರಣಗೊಳಿಸುತ್ತಿದ್ದೇವೆ. ಹಲವು ಸೃಜನಶೀಲ ಸ್ವರೂಪಗಳೊಂದಿಗೆ, ನೀವು ಯಾವ ರೀತಿಯಲ್ಲಿ ನಿಮ್ಮ ಅಭಿವ್ಯಕ್ತಿ ಅಥವಾ ಸೃಜನಶೀಲ ಪ್ರತಿಭೆಯನ್ನು ವ್ಯಕ್ತಪಡಿಸಲು ಬಯಸುತ್ತೀರೋ ಅದು ಇನ್‌ಸ್ಟಾಗ್ರಾಂನಲ್ಲಿರುತ್ತದೆ ಎಂದು ಮೋಹನ್ ಹೇಳಿದ್ದಾರೆ.

Instagram Reels
ಹೊಸ ಫೀಚರ್​ ಏನ್​ ಗೊತ್ತಾ?

'ರೀಲ್ಸ್‌'ನ ಆರಂಭಿಕ ಹಂತದ ಪರೀಕ್ಷೆಯನ್ನು ಭಾರತಕ್ಕೆ ವಿಸ್ತರಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಭಾರತದಲ್ಲಿ ಹುಟ್ಟಿ ಬೆಳೆದವರು ತಮ್ಮ ಸ್ಥಳೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹಂಚಿಕೊಳ್ಳಲು ಇದು ಅವಕಾಶ ನೀಡುತ್ತದೆ. ಈ ಮೂಲಕ ಇದು ಜಾಗತಿಕ ತಾರೆಯಾಗಲು ಪ್ರೇರಣೆ ನೀಡಬಹುದು ಎಂದು ಫೇಸ್‌ಬುಕ್​ ರೀಲ್ಸ್​ ಉತ್ಪನ್ನದ ಉಪಾಧ್ಯಕ್ಷ ವಿಶಾಲ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ಫೀಚರ್​ ದೇಶದ ಬಳಕೆದಾರರಿಗೆ ಇಂದು ಜುಲೈ 8ರ ಬುಧವಾರ ಸಂಜೆ 7.30 ರಿಂದಲೇ ಸಿಗಲಿದೆ. ಆರಂಭದಲ್ಲಿ ದೇಶದ ಕೆಲ ಸೆಲೆಬ್ರಿಟಿಗಳಾದ ಆಮಿ ವಿರ್ಕ್, ಜಿಪ್ಪಿ ಗ್ರೆವಾಲ್, ಕೋಮಲ್ ಪಾಂಡೆ, ಅರ್ಜುನ್ ಕನುಂಗೊ, ಜಾಹ್ನವಿ ದಾಸೆಟ್ಟಿ, ಇಂದ್ರಾಣಿ ಬಿಸ್ವಾಸ್, ಕುಶಾ ಕಪಿಲಾ, ರಾಧಿಕಾ ಬಂಗಿಯಾ, ಆರ್.ಜೆ ಅಭಿನವ್ ಮತ್ತು ಅಂಕುಶ್ ಭಗುನಾರಿಗೆ ಈ ಫೀಚರ್​ ಪ್ರಾಯೋಗಿಕವಾಗಿ ಸಿಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.