ETV Bharat / bharat

''ಕೊರೊನಾ ಪ್ಯಾಕೇಜ್''​ನಿಂದ ಆರ್ಥಿಕ ಸ್ಥಿತಿಗತಿಯ ದುಷ್ಪರಿಣಾಮ: ಜಿಡಿಪಿ ಇಳಿಕೆ ಅಂತಿದೆ ಫಿಚ್​ ಸೊಲ್ಯೂಷನ್​ - ಜಿಡಿಪಿ

ದೇಶದಲ್ಲಿ ಮಾರ್ಚ್​ 25ರಿಂದ ಆರಂಭಗೊಂಡಂತೆ 21 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಕುಂಠಿತವಾಗಲಿದ್ದು ಆದಾಯ ಸಂಗ್ರಹದ ಮೇಲೆಯೂ ಪರಿಣಾಮ ಬೀರಲಿದೆ. ಲಾಕ್​ ಡೌನ್​ಗೆ ಸಿದ್ಧತೆ ನಡೆಸಿಕೊಳ್ಳಲು ಸಾರ್ವಜನಿಕರಿಗೆ ಕೆಲವೇ ಗಂಟೆಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು.

gdp
ಜಿಡಿಪಿ
author img

By

Published : Apr 1, 2020, 8:58 PM IST

Updated : Apr 1, 2020, 9:52 PM IST

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್​-19 ತಡೆಯಲು ವಿಧಿಸಿರುವ ಲಾಕ್​ಡೌನ್​ ನಿಭಾಯಿಸಲು ಪ್ಯಾಕೇಜ್​ ಘೋಷಣೆ ಮಾಡಿದ್ದು, ಇದರಿಂದ ದೇಶದಲ್ಲಿ ಹಣಕಾಸಿನ ಕೊರತೆ ಕಾಡಲಿದೆ. ಈ ಹಣಕಾಸಿನ ಕೊರತೆ 2020-21ನೇ ವರ್ಷದ ಜಿಡಿಪಿ ಮೇಲೆ ಪರಿಣಾಮ ಬೀರಲಿದ್ದು ಜಿಡಿಪಿಯಲ್ಲಿ ಶೇಕಡಾ 6.2ರಷ್ಟಿಂದ 3.5ರವರೆಗೆ ಇಳಿಕೆಯಾಗಲಿದೆ ಎಂದು ಮಾರ್ಕೆಟ್​ ಡಾಟಾ ವಿಶ್ಲೇಷಣಾ ಸಂಸ್ಥೆ ಫಿಚ್ ಸಲ್ಯೂಷನ್​ ಅಭಿಪ್ರಾಯಪಟ್ಟಿದೆ.

ಲಾಕ್​ಡೌನ್​ನಿಂದಾಗಿ ವ್ಯವಹಾರಗಳು ಕುಂಠಿತಗೊಂಡಿವೆ. ಆದಾಯದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಇದು ಕೇಂದ್ರ ಸರ್ಕಾರ ತನ್ನ ವೆಚ್ಚಕ್ಕಾಗಿ ಬೇರೆಡೆಯಿಂದ ಸಾಲ ಪಡೆಯುವುದಕ್ಕೆ ಹಾಗೂ ರಿಸರ್ವ್​ ಬ್ಯಾಂಕ್​ನಿಂದ ಸಾಲ ನಿಧಿಯನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಫಿಚ್​ ಸಲ್ಯೂಷನ್​ ಅಭಿಪ್ರಾಯಪಟ್ಟಿದೆ.

ಭಾರತದ 2020-21ನೇ ಆರ್ಥಿಕ ವರ್ಷದಲ್ಲಿ ಆಗಬಹುದಾದ ಹಣಕಾಸಿನ ಕೊರತೆಯನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ ಎಂದು ಫಿಚ್​ ಸೊಲ್ಯೂಷನ್​ ತಿಳಿಸಿದೆ. ಕೊರೊನಾ ಹರಡದಂತೆ ತಡೆಯಲು ಹಾಗೂ ಲಾಕ್​ಡೌನ್​ ವೇಳೆ ಜನ ಜೀವನ ಸುಧಾರಣೆಗೆ ಹೆಚ್ಚಿನ ವೆಚ್ಚ ಮಾಡಲಾಗಿದ್ದು, ಇದರಿಂದಾಗಿ ಜಿಡಿಪಿ ಕುಸಿತವಾಗಲು ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ. ಲಾಕ್​ಡೌನ್​ ಪ್ಯಾಕೇಜ್​ನಲ್ಲಿ ಬಡವರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಆಹಾರ, ವೈದ್ಯಕೀಯ ಸಿಬ್ಬಂದಿಗೆ ವಿಮೆ ಮುಂತಾದ ಕಾರ್ಯಕ್ರಮಗಳಿಂದ ಆರ್ಥಿಕ ಹೊಡೆತ ತೀವ್ರವಾಗಲಿದೆ ಎಂದು ಹೇಳಿದೆ.

ದೇಶದಲ್ಲಿ ಮಾರ್ಚ್​ 25ರಿಂದ ಆರಂಭಗೊಂಡಂತೆ 21 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಕುಂಠಿತವಾಗಲಿದ್ದು ಆದಾಯ ಸಂಗ್ರಹದ ಮೇಲೆಯೂ ಪರಿಣಾಮ ಬೀರಲಿದೆ. ಲಾಕ್​ ಡೌನ್​ಗೆ ಸಿದ್ಧತೆ ನಡೆಸಿಕೊಳ್ಳಲು ಸಾರ್ವಜನಿಕರಿಗೆ ಕೆಲವೇ ಗಂಟೆಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಗ್ರಾಮೀಣ ಭಾಗದ ಜನರು ಯಾವುದೇ ಸಿದ್ಧತೆಯಿಲ್ಲದೇ ಆಹಾರ, ವಸತಿಗಳನ್ನು ಬಿಟ್ಟು ಗ್ರಾಮಗಳಿಗೆ ವಲಸೆ ಹೋಗಿದ್ದೂ ಕೂಡಾ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಉಲ್ಲೇಖಿಸಲಾಗಿದೆ.

ವೈರಸ್​ನಿಂದಾದ ಈ ಆರ್ಥಿಕ ಸಂಕಷ್ಟ ಮುಂದಿನ ಕೆಲವು ತ್ರೈಮಾಸಿಕಗಳಿಗೂ ಮುಂದುವರೆಯುತ್ತದೆ. ಇದರಿಂದ ಈ ಆರ್ಥಿಕ ವರ್ಷದಲ್ಲಿ ವೈಯಕ್ತಿಕ ಹಾಗೂ ಕಾರ್ಪೊರೇಟ್​ ಆದಾಯದ ಮೇಲೆಯೂ ಕೂಡಾ ಹೊಡೆತ ತೀವ್ರ ಒತ್ತಡ ಬೀಳುತ್ತದೆ. ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ಸಾಮಾಜಿಕ ವಲಯದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಫಿಚ್​ ಸೊಲ್ಯೂಷನ್​​ ಅಭಿಪ್ರಾಯಪಡಿಸಿದೆ. ಅಮೆರಿಕ ಹಾಗೂ ಸಿಂಗಾಪುರ ಕೂಡಾ ಕೊರೊನಾ ವೈರಸ್​ ಹರಡದಂತೆ ಸಾಕಷ್ಟು ಹಣ ವೆಚ್ಚ ಮಾಡಿದ್ದು ಇನ್ನೂ ಹೆಚ್ಚು ಹಣ ವೆಚ್ಚ ಮಾಡಲು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.

Last Updated : Apr 1, 2020, 9:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.