ಹೈದರಾಬಾದ್: ಜುಲೈ ತಿಂಗಳಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಂದಿನ ದಿನಗಳಲ್ಲಿ ಎಬೋಲಾ, ಹಳದಿ ಜ್ವರ, ಎವಿಯನ್ ಇನ್ಲ್ಫಯೆಂಜಾ ಮತ್ತಿತರ ಹತ್ತು ಅಪಾಯಕಾರಿ ವೈರಸ್‌ಗಳಿಂದ ಹರಡುವ ಸೋಂಕು ಜ್ವರಗಳ ವಿರುದ್ಧ ಹೋರಾಡಲು ದೇಶ ಸದಾ ಸಿದ್ಧವಾಗಿರಬೇಕು ಎಂದು ಒತ್ತಿ ಹೇಳಿತ್ತು. ಸಾರ್ವಜನಿಕ ಆರೋಗ್ಯದ ಮೇಲೆ ಈ ವೈರಸ್ ಸೋಂಕುಗಳು ಅತೀವ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮಂಡಳಿ ಈ ಎಚ್ಚರಿಕೆ ನೀಡಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ, ಎಲ್ಲಾ ದೇಶಗಳ ಆರೋಗ್ಯ ವ್ಯವಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಅವನತಿಯತ್ತ ತಳ್ಳಿತು. ದೊಡ್ಡ ಮಟ್ಟದಲ್ಲಿ ಈ ರೋಗ ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹೇರಿತು. ಜಗತ್ತಿನ ಉದ್ದಗಲಕ್ಕೂ ಇದು ಈ ವರೆಗೆ ಸುಮಾರು 18 ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಇದರ ಜೊತೆಗೆ, ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆಯ ಮೇಲೆ ಹೊಡೆತ ನೀಡಿತು.
ವಿಶ್ವ ಆರೋಗ್ಯ ಸಂಸ್ಥೆ ಈ ನಿಟ್ಟಿನಲ್ಲಿ ನೀಡಿದ ಹೇಳಿಕೆ ಇಲ್ಲಿ ಗಮನಾರ್ಹ. ಈ ವರ್ಷ (2020) ಕೋವಿಡ್-19 ಸೋಂಕು ವಿಶ್ವದ ಆರೋಗ್ಯ ವ್ಯವಸ್ಥೆಯನ್ನು ನಾಶಪಡಿಸಿತು ಎಂದು ವಿಷಾದಿಸಿರುವ ಸಂಸ್ಥೆ, ಕೋವಿಡ್ 19 ರೋಗವು ಅತಿ ವೇಗವಾಗಿ ವಿಶ್ವಾದ್ಯಂತ ಹರಡಿ, ನಮ್ಮ ದೇಶಗಳಲ್ಲಿನ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿನ ದೋಷಗಳನ್ನು ಎತ್ತಿ ತೋರಿಸಿತು ಎಂದು ಅಭಿಪ್ರಾಯಪಟ್ಟಿದೆ.
ಇದರ ಜೊತೆಗೆ, ಸಂಸ್ಥೆಯು ಇನ್ನೊಂದು ಆಘಾತಕಾರಿ ಸಂಗತಿಯನ್ನು ಕೂಡಾ ತಿಳಿಸಿದೆ. ಅದೇನೆಂದರೆ, ಕಳೆದ ಎರಡು ದಶಕಗಳಲ್ಲಿ ವೈದ್ಯಕೀಯ ರಂಗದ ನಾನಾ ಕ್ಷೇತ್ರಗಳಲ್ಲಿ ನಾವು ಸಾಧಿಸಿದ ಪ್ರಗತಿಯ ಎಲ್ಲಾ ಲಾಭಗಳನ್ನು ಈ ಸಾಂಕ್ರಾಮಿಕ ರೋಗ ನಾಶಗೊಳಿಸಿದೆ. ಈ ಸಂಶೋಧನೆಯ ಫಲ ನಮಗೆ ತಲುಪದಂತೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.
ಜಗತ್ತನ್ನೆ ತಲ್ಲಣಗೊಳಿಸಿರುವ, ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ನಾನಾ ವೈದ್ಯಕೀಯ ಅಸ್ತ್ರಗಳು ರೂಪುಗೊಳ್ಳುತ್ತಿರುವ ಈ ಸಮಯದಲ್ಲಿ, ಅವುಗಳನ್ನು ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸೂಕ್ತವಾಗಿ ಬಳಸುವ ಸಂಬಂಧ, ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎಲ್ಲಾ ದೇಶಗಳು ಹತ್ತು ಅಂಶಗಳ ಕ್ರಿಯಾ ಯೋಜನೆಯನ್ನು ಜಾರಿಗೆ ತರಬೇಕೆಂದು ಸೂಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎಲ್ಲರೂ ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲರ ಆರೋಗ್ಯಕ್ಕಾಗಿ ಜೊತೆಯಾಗಿ ಕೈಜೋಡಿಸಿ ಮುನ್ನಡೆಯುವಂತೆ, ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೂ ಕರೆ ನೀಡಿದೆ. ಕೋವಿಡ್-19 ಲಸಿಕೆಗಳ ತ್ವರಿತ ಉತ್ಪಾದನೆಗೆ “ಬಯೋ ಬ್ಯಾಂಕ್” ರಚಿಸುವ ಪ್ರಸ್ತಾಪವನ್ನೂ ಅದು ಜಗತ್ತಿನ ರಾಷ್ಟ್ರಗಳ ಮುಂದಿಟ್ಟಿದೆ.
ಇದರ ಜೊತೆಗೆ, ಕೋವಿಡ್ ರೋಗದ ವಿರುದ್ಧದ ಚಿಕಿತ್ಸೆಗೆ ಅಗತ್ಯವಾಗಿರುವ ಹಣಕಾಸಿನ ಕಾರಣಕ್ಕೆ ಲಕ್ಷಾಂತರ ಕುಟುಂಬಗಳು ಬಡತನದತ್ತ ಹೆಜ್ಜೆ ಇಡುತ್ತಿವೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಸುಮಾರು ಆರು ಕೋಟಿ ಜನರು ವೈದ್ಯಕೀಯ ಆಕಸ್ಮಿಕ ಸಮಯದಲ್ಲಿ ಎದುರಾಗುವ ಭಾರಿ ಖರ್ಚಿನ ಕಾರಣಕ್ಕಾಗಿ ಬಡತನದ ಪ್ರಪಾತಕ್ಕೆ ನೂಕಲ್ಪಡುತ್ತಾರೆ. ಈ ಸಂಖ್ಯೆ ಕೋವಿಡ್ ೧೯ ಸಮಯದಲ್ಲಿ ಇನ್ನಷ್ಟು ಹೆಚ್ಚಳಗೊಂಡಿದೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕೋವಿಡ್ ಸಾವಿಗೆ ಕಾರಣವಾಗುವ ಹತ್ತು ಪ್ರಮುಖ ಕಾರಣಗಳಲ್ಲಿ ಏಳು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕಾರಣ ಎಂದು ಹೇಳುತ್ತದೆ. ಇದರ ಜೊತೆಗೆ ಈ ರೋಗವನ್ನು ತಡೆಗಟ್ಟಲು ಮಾನಸಿಕ ಆರೋಗ್ಯ ರಕ್ಷಣೆ ಮತ್ತು ತಂಬಾಕು ದುಶ್ಚಟಗಳಿಗೆ ಈಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸ್ಥೆ ಎಲ್ಲಾ ದೇಶಗಳಿಗೂ ಸೂಚಿಸಿದೆ. ಇದು ನಿಜಕ್ಕೂ ಸ್ವಸ್ಥ ಭಾರತ್ (ಆರೋಗ್ಯಕರ ಭಾರತ) ದದೆಡೆ ನಾವು ಸಾಗಲು ಬೇಕಾದ ರಹದಾರಿಯಾಗಿದೆ.
15 ನೇ ಹಣಕಾಸು ಆಯೋಗದ ಅಡಿಯಲ್ಲಿ ರಚಿಸಲಾದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ, ಉನ್ನತ ಮಟ್ಟದ ತಜ್ಞರ ತಂಡ, ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಬೇಕೆಂದು ಶಿಫಾರಸು ಮಾಡಿತ್ತು. ಮುಂದಿನ ವರ್ಷ ನಮ್ಮ ದೇಶ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ಆಚರಿಸುವ ಸಂದರ್ಭದಲ್ಲಿ ಇದನ್ನು ಜಾರಿಗೊಳಿಸಬೇಕು ಎಂದು ಅದು ಶಿಫಾರಸು ಮಾಡಿದೆ.
ಪ್ರಸ್ತುತ ವಿಶ್ವದ 17 ಪ್ರತಿಶತದಷ್ಟು ಜನಸಂಖ್ಯೆಯು ಭಾರತದಲ್ಲಿದೆ. ಆದಾಗ್ಯೂ ಇದು ಪ್ರಪಂಚದಲ್ಲಿ ವಿಶ್ವದಾದ್ಯಂತ ನಾನಾ ರೋಗಗಳಿಂದ ಬಳಲುತ್ತಿರುವ 20 ಪ್ರತಿಶತದಷ್ಟು ಜನಸಂಖ್ಯೆ ನಮ್ಮ ದೇಶದಲ್ಲಿದ್ದಾರೆ. ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನಾವು ಎಲ್ಲಿ ಸೋಲುತ್ತಿದ್ದೇವೆ ಎಂಬುದನ್ನು ಈ ದತ್ತಾಂಶ ಸೂಚಿಸುತ್ತದೆ. ನಮ್ಮ ದೇಶ, ನಮ್ಮ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವಲ್ಲಿ ಸೋಲುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆ ಇಲ್ಲಗಳ ಆಗರವಾಗಿದೆ. ಇದು ಈ ದತ್ತಾಂಶದಿಂದ ಮತ್ತೆ ಶ್ರುತಗೊಂಡಿದೆ.
ನಮ್ಮ ದೇಶದ ಆರೋಗ್ಯ ವ್ಯವಸ್ಥೆಯಲ್ಲಿನ ಆಘಾತಕಾರಿ ಅಂಶಗಳು ಇಲ್ಲಿವೆ. ಒಳ್ಳೆಯ ವ್ಯವಸ್ಥೆ ಕಲ್ಪಿಸಿದರೆ, ಪ್ರಾಥಮಿಕ ಆರೋಗ್ಯ ಮಟ್ಟದಲ್ಲಿ ನಮ್ಮದೇಶದ 90 ಪ್ರತಿಶತ ರೋಗಗಳನ್ನು ಗುಣಪಡಿಸಬಹುದು ಎಂದು ವಿಶ್ವ ಬ್ಯಾಂಕ್ ಬಹಳ ಹಿಂದೆಯೇ ಹೇಳಿದೆ.
ದುರಂತವೆಂದರೆ, ನಮ್ಮ ಪ್ರಾಥಮಿಕ ಆರೋಗ್ಯ ಕ್ಷೇತ್ರದ ದುರವಸ್ಥೆಯೆ, ದೇಶದಲ್ಲಿ ಲಕ್ಷಾಂತರ ಸಾವಿಗೆ ಪ್ರತಿವರ್ಷ ಕಾರಣವಾಗುತ್ತಿದೆ. ಸಾಂಕ್ರಾಮಿಕವಲ್ಲದ ಕಾಯಿಲೆಗಳು ಅವುಗಳ ವಿನಾಶಕಾರಿ ಪರಿಣಾಮಗಳು ಮತ್ತು ಮರಣಗಳ ದೃಷ್ಟಿಯಿಂದ ಸಾಂಕ್ರಾಮಿಕ ರೋಗಗಳನ್ನು ಮೀರಿವೆ.
ಮತ್ತೊಬ್ಬರಿಗೆ ಹರಡದ, ಸಾಂಕ್ರಾಮಿಕವಲ್ಲದ ರೋಗ, ಜೀವನ ಶೈಲಿ ಕಾರಣಕ್ಕಾಗಿ ಇಂದು ನಮ್ಮ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ವರದಿಯಾಗುತ್ತಿದೆ. ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿ ಈಗ ಭಾರತಕ್ಕಿದೆ. ಇದರ ಜೊತೆಗೆ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಹೃದ್ರೋಗಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಏರುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, ಭಾರತ ಸರ್ಕಾರವು ಕ್ಯಾನ್ಸರ್, ಮಧುಮೇಹ, ಹೃದಯದ ಕಾಯಿಲೆಗಳು ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು 2010 ರಲ್ಲಿ ಪ್ರಾರಂಭಿಸಿತು. ಆದರೆ ಸಮಸ್ಯೆಯೆಂದರೆ, ಈ ಕಾರ್ಯಕ್ರಮದಡಿಯಲ್ಲಿ ಶಿಬಿರಗಳಿಗೆ ಆಗಮಿಸುವ ಎಲ್ಲಾ ಜನರ ಪರೀಕ್ಷೆಗಳನ್ನು ನಡೆಸಲು ನಾನಾ ಕಾರಣಕ್ಕಾಗಿ ಸಾಧ್ಯವಾಗುತ್ತಿಲ್ಲ.
ಪರಿಣಾಮ, ಈ ಕಾರ್ಯಕ್ರಮವು ಈ ರೋಗ ನಿಯಂತ್ರಣ ನಿಟ್ಟಿನಲ್ಲಿ ಹೆಚ್ಚಿನದೇನನನ್ನು ಸಾಧಿಸಲು ಸರಕಾರಗಳಿಗೆ ನೆರವಾಗಲಿಲ್ಲ. ಇದರ ಜೊತೆಗೆ, ಈ ಕಾರ್ಯಕ್ರಮಗ, ಆರೋಗ್ಯ ಕೇಂದ್ತಗಳಿಗೆ, ಆರೋಗ್ಯ ಶಿಬಿರಗಳಿಗೆ ಭೇಟಿ ನೀಡುವ ಜನರ ಆರೋಗ್ಯ ತಪಾಸಣೆಗೆ ಮಾತ್ರ ಸೀಮಿತಗೊಂಡಿತು. ಇಡೀ ಜನಸಂಖ್ಯೆಯನ್ನು ತಪಾಸಿಸಲು ಇದರ ಮೂಲಕ ಸಾಧ್ಯವಾಗಲಿಲ್ಲ.
ಈಗ ಸರಕಾರದ ಮಟ್ಟದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ದೇಶದಲ್ಲಿ ಸುಮಾರು 27 ಕೋಟಿ ಜನರು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೋವಿಡ್ -19 ಗೆ ಬಲಿಯಾದವರಲ್ಲಿ ಹೆಚ್ಚಿನವರು ಸಾಂಕ್ರಾಮಿಕವಲ್ಲದ ಕಾಯಿಲೆಗಳ ರೂಪದಲ್ಲಿ ಸಹ-ಅಸ್ವಸ್ಥತೆಗಳಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿಯೆ ಸರಕಾರ ಇದೀಗ, ಮೊದಲ ಹಂತದಲ್ಲಿಯೇ ಇಂತಹ ಸಹಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿದೆ.
ಇನ್ನು ಆರೋಗ್ಯ ಸೇವೆಗಳ ವಿಸ್ತರಣೆ ಮತ್ತು ದಾಖಲೆಗಳ ನಿರ್ವಹಣೆ (ಎನ್‌ಸಿಡಿ) ಸಂಸ್ಥೆಯ ದಾಖಲೆಗಳು ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಆನಾರೋಗ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ದಾಖಲೆಗಳ ಪ್ರಕಾರ ಧೂಮಪಾನಿಗಳು ನ್ಯುಮೋನಿಯಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಧೂಮಪಾನಿಗಳಲ್ಲದವರಿಗಿಂತ 14 ಪಟ್ಟು ಹೆಚ್ಚು ಎಂದು ಸೂಚಿಸುತ್ತದೆ. ಇನ್ನೂ ಧೂಮಪಾನಕ್ಕೆ ಅವಕಾಶ ನೀಡುವುದು, ಸಾರ್ವಜನಿಕ ಆರೋಗ್ಯದೊಂದಿಗಿನ ಸಾವಿನ ಆಟ ಎಂದರೆ ತಪ್ಪಾಗಲಾರದು.
ಇನ್ನು ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ, ತಳಮಟ್ಟದಿಂದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಶಿಫಾರಸು ಮಾಡಿದೆ. ಈ ಶಿಫಾರಸು ಅನುಷ್ಠಾನಕ್ಕೆ ಯೋಗ್ಯವಾಗಿದೆ. ಇದು ಸಾಧ್ಯವಾದರೆ ಮಾತ್ರ, ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿದೆ.