ಸೀತಾಮರ್ಹಿ(ಬಿಹಾರ) : ಇಂಡೋ - ನೇಪಾಳ ಗಡಿಯಲ್ಲಿ ನಿನ್ನೆ ನಡೆದ ಗುಂಡಿನ ಚಕಮಕಿ ವೇಳೆ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ರಾಮ್ ಲಗನ್ ಕಿಶೋರ್ನನ್ನು ನೇಪಾಳ ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ.
ಭಾರತ - ನೇಪಾಳ ಗಡಿ ಪ್ರದೇಶವಾದ ಬಿಹಾರದ ಸೀತಾಮರ್ಹಿ ಜಿಲ್ಲೆಯ ಸೋನ್‌ಬರ್ಸಾದ ಜಾಂಕಿ ಗ್ರಾಮದ ಸಮೀಪ ಶುಕ್ರವಾರ ನೇಪಾಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಅಲ್ಲದೇ ರಾಮ್ ಲಗನ್ ಕಿಶೋರ್ ಎಂಬಾತನನ್ನು ಬಂಧಿಸಿದ್ದರು. ಇಂದು ಆತನನ್ನು ನೇಪಾಳ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮ್ ಲಗನ್, ಮೈಮೇಲೆ ಆಗಿರುವ ಗಾಯದ ಗುರುತುಗಳನ್ನು ತೋರಿಸುತ್ತಾ ಪೊಲೀಸರು ನೀಡಿದ್ದ ಚಿತ್ರಹಿಂಸೆ ಕುರಿತು ತಿಳಿಸುತ್ತಾನೆ.
ಘಟನೆಯಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.