ಅರುಣಾಚಲ ಪ್ರದೇಶ: ಭಾರತೀಯ ಸೈನಿಕರು ಮೈನಸ್ ಝೀರೋ ಟೆಂಪರೇಚರ್ನಲ್ಲೂ ನಾಗರಿಕರು ಹಾಗೂ ವಾಹನಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.
ಸುಮಾರು 14,000 ಅಡಿ ಎತ್ತರದಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿದೆ. ಸೆಲಾ ಪಾಸ್ನಲ್ಲಿ ಮಾರ್ಚ್ 7 ಹಾಗೂ 8ರಂದು ರಾತ್ರಿ ಭಾರೀ ಹಿಮಪಾತವಾಗಿತ್ತು. ಹಿಮದಲ್ಲಿ ಸಿಲುಕಿದ್ದ 390 ನಾಗರಿಕರನ್ನು ಮತ್ತು 175 ವಾಹನಗಳನ್ನು ಸೈನಿಕರನ್ನ ರಕ್ಷಿಸಿದ್ದಾರೆ.
ರಕ್ಷಿಸಿದ ನಾಗರಿಕರಿಗೆ ವೈದ್ಯಕೀಯ ನೆರವು ಮತ್ತು ಬಿಸಿ ತಿಂಡಿಗಳನ್ನು ನೀಡಲಾಯಿತು. ಭಾರತೀಯ ಸೇನೆಯ ಈ ಕಾರ್ಯಕ್ಕೆ ನಾಗರಿಕರು ಕೃತಜ್ಞತೆ ವ್ಯಕ್ತಪಡಿಸಿದರು.
ಅನೇಕ ಜೀವಗಳನ್ನು ಉಳಿಸುವುದರ ಜೊತೆಗೆ, ಮೈನಸ್ ಝೀರೋ ಚಳಿಯ ವಾತಾವರಣದಲ್ಲೂ 16 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.