ETV Bharat / bharat

ಉಗ್ರರ ವಿರುದ್ಧ ದಾಳಿ ನಿರಂತರ; ಪಾಕ್​ ಹೇಳಿಕೆಗೆ ಭಾರತೀಯ ಸೇನೆ ತಿರುಗೇಟು - ಪಾಕ್​ ಅಕ್ರಮಿತ ಕಾಶ್ಮೀರ್​

ಪಾಕ್​​ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನುಗ್ಗಿ ದಾಳಿ ನಡೆಸಿದ್ದಾರೆ ಎಂಬ ಪಾಕ್​ ಆರೋಪಕ್ಕೆ ಭಾರತೀಯ ಸೇನಾಧಿಕಾರಿಗಳು ಪ್ರತ್ಯುತ್ತರ ನೀಡಿದೆ. ಗಡಿ ನಿಯಂತ್ರಣ ರೇಖೆಯ ಮೂಲಕವಾಗಿ ನಿರಂತರವಾಗಿ ಉಗ್ರರು ಭಾರತದೊಳಗೆ ನುಗ್ಗುತ್ತಿದ್ದು, ಅವರಿಗೆ ನಮ್ಮ ಸೇನೆ ತಕ್ಕ ಉತ್ತರ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಗ್ರ ತಾಣಗಳ ಮೇಲೆ ಮತ್ತೊಂದು ದಾಳಿ
author img

By

Published : Aug 3, 2019, 5:49 PM IST

Updated : Aug 3, 2019, 7:06 PM IST

ನವದೆಹಲಿ: ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಯೋಧರು ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿನ ಉಗ್ರತಾಣಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಪಾಕ್​ ವರದಿಗೆ ಭಾರತ ತಿರುಗೇಟು ನೀಡಿದೆ. ಪಾಕ್​ ಮಾಧ್ಯಮಗಳಲ್ಲಿ ಬಿತ್ತರಗೊಂಡ ಮಾಹಿತಿ ಪ್ರಕಾರ, ಪಾಕ್​ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ಮತ್ತೊಂದು ದಾಳಿ ನಡೆಸಿದ್ದು, ಅನೇಕರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿತ್ತು.

ಭಾರತೀಯ ಸೇನೆ ಹೇಳಿದ್ದೇನು?

ಗಡಿ ನಿಯಂತ್ರಣ ರೇಖೆಯ ಮೂಲಕವಾಗಿ ನಿರಂತರವಾಗಿ ಉಗ್ರರನ್ನು ರವಾನಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉಗ್ರರ ಒಳನುಸುಳುವಿಕೆ ಕಂಡುಬಂದಾಗ ದಾಳಿ ನಡೆಸುವುದು ನಮ್ಮ ಹಕ್ಕು ಎಂದು ಪಾಕ್‌ ಸೇನಾಧಿಕಾರಿಗಳ ಜತೆಗಿನ ಮಾತುಕತೆಯಲ್ಲೇ ನಾವು ಸ್ಪಷ್ಟಪಡಿಸಿದ್ದೇವೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ಸ್ಷಪ್ಟಪಡಿಸಿದೆ.

ಪಾಕ್‌ ಮಾಧ್ಯಮಗಳಲ್ಲಿ ದಾಳಿಯ ಸುದ್ದಿ, ಸೇನೆಯಿಂದ ಟ್ವೀಟ್‌:

  • Use of cluster bombs by Indian Army violating international conventions is condemnable. No weapon can suppress determination of Kashmiris to get their right of self determination. Kashmir runs in blood of every Pakistani. Indigenous freedom struggle of Kashmiris shall succeed,IA.

    — DG ISPR (@OfficialDGISPR) August 3, 2019 " class="align-text-top noRightClick twitterSection" data=" ">

ಪಾಕ್​ ಸುದ್ದಿ ಮಾಧ್ಯಮಗಳಲ್ಲಿ ಭಾರತೀಯ ಸೇನಾ ದಾಳಿ ಬಗ್ಗೆ ವರದಿ ಬಿತ್ತರಗೊಂಡಿದೆ. ಈ ಮಧ್ಯೆ ಪಾಕಿಸ್ತಾನದ ಆರ್ಮಿ ಫೋರ್ಸ್​ನ ವಕ್ತಾರ ಮೇಜರ್​ ಜನರಲ್​ ಆಸೀಫ್​ ಗಪೂರ್​ ಕೂಡ ಈ ಮಾಹಿತಿಯನ್ನು ಖಚಿತಪಡಿಸಿ, ತಮ್ಮ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂದು ಎಂದು ತಿಳಿದುಬಂದಿದೆ. ಕ್ಲಸ್ಟರ್‌ ಬಾಂಬ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ಡಾನ್‌ ವರದಿ ಮಾಡಿದೆ. ಜುಲೈ 30 ಹಾಗೂ 31ರ ವೇಳೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪಾಕ್​ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.

Intro:Body:

ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆಯಿಂದ ಮತ್ತೊಂದು ದಾಳಿ... ಫಿರಂಗಿಗಳ ಮೂಲಕ ಅಟ್ಯಾಕ್​​! 

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಯೋಧರು ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದು, ಇದೀಗ ಪಾಕ್​ ಉಗ್ರರ  ಅಡಗುತಾಣಗಳ ಮೇಲೆ ಯೋಧರು ಮತ್ತೊಂದು ದಾಳಿ ನಡೆಸಿ ಅವರ ನೆಲೆಗಳನ್ನ ಧ್ವಂಸಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಸೇನೆ ಫಿರಂಗಿಗಳ ಮೂಲಕ ದಾಳಿ ನಡೆಸಿದ್ದು, ಅನೇಕ ಉಗ್ರ ನೆಲೆಗಳನ್ನ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಪಾಕ್​ ಮಾಧ್ಯಮಗಳಲ್ಲೂ ವರದಿ ಬಿತ್ತರಗೊಂಡಿದೆ. ಇದರ ಮಧ್ಯೆ ಪಾಕಿಸ್ತಾನದ ಆರ್ಮಿ ಫೋರ್ಸ್​ನ ವಕ್ತಾರ ಮೇಜರ್​ ಜನರಲ್​ ಆಸೀಫ್​ ಗಪೋರ್​ ಕೂಡ ಈ ಮಾಹಿತಿಯನ್ನ ಖಚಿತಪಡಿಸಿ, ತಮ್ಮ ಟ್ವಿಟರ್​ನಲ್ಲಿ ಮಾಹಿತಿ ರಿಲೀಸ್​ ಮಾಡಿದ್ದಾರೆ. 

ಭಾರತೀಯ ಗಡಿಯಿಂದ 30 ಕಿ.ಮೀ ಒಳಗೆ ಕಾರ್ಯಾಚರಣೆ ನಡೆಸಿರುವ ಭಾರತೀಯ ಯೋಧರ ಕಾರ್ಯಾಚರಣೆಯಿಂದ ಪಾಕ್​ ನಡೆಸುತ್ತಿದ್ದ ನೀಲಂ-ಝೇಲಂ ಯೋಜನೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಇಂತಹ ಪ್ಲಾನ್​ ನಡೆಸುವ ಉದ್ದೇಶದಿಂದಲೇ ಭಾರತೀಯ ಗೃಹ ಇಲಾಖೆ ಎರಡು ದಿನಗಳ ಹಿಂದೆ ಅಮರನಾಥ್​ ಯಾತ್ರೆ ರದ್ಧುಗೊಳಿಸಿ, ಕಣಿವೆ ನಾಡಿನಲ್ಲಿ ಹೆಚ್ಚುವರಿ ಸೈನಿಕರನ್ನ ನಿಯೋಜನೆ ಮಾಡಿತ್ತು. ಜತೆಗೆ ಮೂರು ದಿನಗಳ ಹಿಂದೆ ಪ್ರಧಾನಿ ಅಲ್ಲಿನ ಮಾಜಿ ಸಿಎಂ ಫಾರೂಖ್​ ಅಬ್ದುಲ್ಲಾ ಹಾಗೂ ಗವರ್ನರ್​ ಜತೆ ಮಾತುಕತೆ ನಡೆಸಿದ್ದರು. 

Conclusion:
Last Updated : Aug 3, 2019, 7:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.