ETV Bharat / bharat

ಚೀನಾ ಗಡಿಯಲ್ಲಿ ಭಾರತೀಯ ಯೋಧರ ಹದ್ದಿನ ಕಣ್ಗಾವಲು:  ಹೈ ಅಲರ್ಟ್​! - ಗಯಾಲಡುಂಗ್ ಚೆಕ್​ಪೋಸ್ಟ್​

ಗಯಾಲಡುಂಗ್​ ಚೆಕ್​ಪೋಸ್ಟ್​ ಈ ಭಾಗದ ಗಡಿಯಲ್ಲಿನ ಕೊನೆಯ ಚೆಕ್​ಪೋಸ್ಟ್​ ಆಗಿದ್ದು, ಬಹುತೇಕ ಎಲ್ಲ ಯೋಧರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಚೀನಾ ಗಡಿಯಲ್ಲಿ ಭಾರತೀಯ ಯೋಧರು ನಿರಂತರವಾಗಿ ಕಾವಲು ಕಾಯುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

indian-army-alert
indian-army-alert
author img

By

Published : Jun 19, 2020, 2:24 PM IST

ಚಮೋಲಿ: ಗಾಲ್ವಾನ ವ್ಯಾಲಿಯಲ್ಲಿ ನಡೆದ ರಕ್ತಸಿಕ್ತ ಸಂಘರ್ಷದ ನಂತರ ಭಾರತ - ಚೀನಾ ಗಡಿಯಲ್ಲಿ ಭಾರತೀಯ ಯೋಧರು ಹದ್ದಿನ ಕಣ್ಗಾವಲಿಟ್ಟಿದ್ದು, ಚೀನಾ ಗಡಿ ಸಂಧಿಸುವ ಎಲ್ಲ ಚೆಕ್​ಪೋಸ್ಟ್​ಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ಭಾರತ - ಚೀನಾ ಗಡಿ ಬಳಿಯ ಕೊನೆಯ ಚೆಕ್​ಪೋಸ್ಟ್​ ನೀತಿ ಗ್ರಾಮದ ಹತ್ತಿರವಿದೆ. ಇಲ್ಲಿಗೆ ಖುದ್ದಾಗಿ ಭೇಟಿ ನೀಡಿದ ಈಟಿವಿ ಭಾರತ ತಂಡ ಪರಿಸ್ಥಿತಿಯ ಅವಲೋಕನ ನಡೆಸಿತು.

ಕಳೆದ ಕೆಲ ದಿನಗಳಿಂದ ಸೇನಾಪಡೆಗಳ ಓಡಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಎಲ್ಲ ಚೆಕ್​ಪೋಸ್ಟ್​ಗಳಲ್ಲಿ ಕಾವಲನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮಲಾರಿ, ಗಮಶಾಲಿ ಹಾಗೂ ನೀತಿ ಗ್ರಾಮಗಳ ಬಳಿ ಕ್ಯಾಂಪ್​ಗಳಲ್ಲಿ ಬೀಡುಬಿಟ್ಟಿದ್ದ ಸೇನೆ ಹಾಗೂ ಐಟಿಬಿಪಿ ಯೋಧರನ್ನು ಈಗ ಇಲ್ಲಿಂದ 25 ಕಿಮೀ ದೂರದ ಗಯಾಲಡುಂಗ್​ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ವಿಮಲಾಸ ಚೆಕ್​ಪೋಸ್ಟ್​ನಲ್ಲಿ ಯಾವಾಗಲೂ ಕಾವಲಿರುತ್ತಿದ್ದ ಐಟಿಬಿಪಿ ಯೋಧರು ಸಹ ಗಯಾಲಡುಂಗ್​ಗೆ ತೆರಳಿದ್ದಾರೆ ಎಂದು ನೀತಿ ಗ್ರಾಮಸ್ಥರು ಮಾಹಿತಿ ನೀಡಿದರು.

ಗಯಾಲಡುಂಗ್​ ಚೆಕ್​ಪೋಸ್ಟ್​ ಈ ಭಾಗದ ಗಡಿಯಲ್ಲಿನ ಕೊನೆಯ ಚೆಕ್​ಪೋಸ್ಟ್​ ಆಗಿದ್ದು ಬಹುತೇಕ ಎಲ್ಲ ಯೋಧರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಚೀನಾ ಗಡಿಯಲ್ಲಿ ಭಾರತೀಯ ಯೋಧರು ನಿರಂತರವಾಗಿ ಕಾವಲು ಕಾಯುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.