ETV Bharat / bharat

ಭಾರತಕ್ಕೆ ಇಂಧನ ಬಲ ತುಂಬಲು ಕಜಕಿಸ್ತಾನದ 7,500 ಟನ್ ಯುರೇನಿಯಂ - undefined

ಭಾರತದ ಪರಮಾಣು ಇಂಧನ ಕೊರತೆ ನೀಗಿಸಲು ವಾರ್ಷಿಕವಾಗಿ 7,500 ಟನ್​ ಯುರೇನಿಯಂ ಅನ್ನು ಐದು ವರ್ಷಗಳ ಕಾಲ ಸರಬರಾಜು ಮಾಡಲು ಕಜಕಿಸ್ತಾನ ಸಿದ್ಧವಿದ್ದು, ಒಪ್ಪಂದ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದು ಭಾರತದಲ್ಲಿರುವ ಅಲ್ಲಿನ ರಾಯಭಾರಿ ಸರ್​ಸೆನ್ ಬಯೆಮ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Apr 26, 2019, 12:01 AM IST

ನವದೆಹಲಿ: ಭಾರತಕ್ಕೆ 7500 ಟನ್ ಯುರೇನಿಯಂ ಸರಬರಾಜು ಮಾಡುವುದಾಗಿ ಕಜಕಿಸ್ತಾನ ಹೇಳಿದೆ.

ವಿಶ್ವದಲ್ಲಿಯೇ 2ನೇ ಅತಿಹೆಚ್ಚು ಯುರೇನಿಯಂ ನಿಕ್ಷೇಪ ಹೊಂದಿರುವ ಕಜಕಿಸ್ತಾನ​, ಭಾರತಕ್ಕೆ ಅತಿ ಹೆಚ್ಚು ಯುರೇನಿಯಂ ಪೂರೈಕೆ ಮಾಡುವ ರಾಷ್ಟ್ರವಾಗಿದೆ.

ಭಾರತದ ಪರಮಾಣು ಇಂಧನ ಕೊರತೆ ನೀಗಿಸಲು ವಾರ್ಷಿಕವಾಗಿ 7,500 ಟನ್​ ಯುರೇನಿಯಂನ್ನು ಐದು ವರ್ಷಗಳ ಕಾಲ ಸರಬರಾಜು ಮಾಡಲು ಕಜಕಿಸ್ತಾನ​ ಸಿದ್ಧವಿದ್ದು, ಒಪ್ಪಂದ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದು ಕಜಕಿಸ್ತಾನ್ ರಾಯಭಾರಿ ಸರ್​ಸೆನ್ ಬಯೆಮ್ ಹೇಳಿದ್ದಾರೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಜಕಿಸ್ತಾನ ​ಭೇಟಿಯ ಸಂದರ್ಭದಲ್ಲಿ ವಾರ್ಷಿಕವಾಗಿ 5,000 ಟನ್ ಯುರೇನಿಯಂ ಸರಬರಾಜು ಮಾಡಲು ಒಪ್ಪಂದವಾಗಿತ್ತು. ಆದರೆ, ಈ ಪ್ರಮಾಣವನ್ನು 7,500 ಟನ್​ವರೆಗೆ ವಿಸ್ತರಿಸಲಾಗಿದೆ ಎಂದು ಬಯೆಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರವಾಗಿರುವ ಕಜಕಿಸ್ತಾನ ​ಭಾರತದೊಂದಿಗೆ ಮೊದಲೇ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡ ದೇಶವಾಗಿದ್ದು, 2009ರಲ್ಲಿ ಈ ಕುರಿತಂತೆ ಏರ್ಪಟ್ಟ ಒಪ್ಪಂದದಂತೆ ಭಾರತಕ್ಕೆ 3,000 ಯುರೇನಿಯಂ ಸರಬರಾಜು ಮಾಡಿತ್ತು.

ಇದೇ ವೇಳೆ ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರಗಳ ಬಗ್ಗೆಯೂ ಪ್ರಸ್ತಾಪಿಸಿರುವ ರಾಯಭಾರಿ ಬಯೆಮ್​, ನಾಗರಿಕ ಪರಮಾಣು ಸಹಕಾರದ ಜೊತೆಗೆ, ಬಾಹ್ಯಾಕಾಶ, ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ- ಕಜಕಿಸ್ತಾನ​ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.