ಹೈದರಾಬಾದ್: ಸೋಮವಾರ ಒಂದೇ ದಿನ ತೆಲಂಗಾಣದಲ್ಲಿ 79 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದು ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪಾಸಿಟಿವ್ ಕೇಸ್ಗಳಾಗಿವೆ.
ಈ ಎಲ್ಲಾ ಹೊಸ ಕೇಸ್ಗಳು ಹೈದರಾಬಾದ್ನಲ್ಲೇ ವರದಿಯಾಗಿದ್ದು, ನಗರದ ಜನತೆಯನ್ನು ಬೆರಗಾಗಿಸಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 1,275 ಕೊರೊನಾ ಕೇಸ್ಗಳು ದಾಖಲಾಗಿದ್ದು, ಇದರಲ್ಲಿ ಕಳೆದ ಮೂರೇ ದಿನದಲ್ಲಿ 142 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 5 ಬೇರೆ ರಾಜ್ಯಗಳಿಂದ ಬಂದ ವಲಸಿಗರು ಸೇರಿದ್ದಾರೆ.
-
Media bulletin on status of positive cases of #COVID19 in Telangana. (Dated. 11.05.2020)#TelanganaFightsCorona #StayHome #StaySafe pic.twitter.com/RbVCobH2Kd
— Eatala Rajender (@Eatala_Rajender) May 11, 2020 " class="align-text-top noRightClick twitterSection" data="
">Media bulletin on status of positive cases of #COVID19 in Telangana. (Dated. 11.05.2020)#TelanganaFightsCorona #StayHome #StaySafe pic.twitter.com/RbVCobH2Kd
— Eatala Rajender (@Eatala_Rajender) May 11, 2020Media bulletin on status of positive cases of #COVID19 in Telangana. (Dated. 11.05.2020)#TelanganaFightsCorona #StayHome #StaySafe pic.twitter.com/RbVCobH2Kd
— Eatala Rajender (@Eatala_Rajender) May 11, 2020
ರಾಜ್ಯದಲ್ಲಿ ಈವರೆಗೆ 801 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಸದ್ಯ 444 ಸೋಂಕಿತರು ನಗರದ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಮೂರು ರೆಡ್ ಝೋನ್ ಜಿಲ್ಲೆಗಳಿದ್ದು, ಹೈದರಾಬಾದ್, ರಂಗಾರೆಡ್ಡಿ ಹಾಗೂ ಮೆಡ್ಚಲ್ ಜಿಲ್ಲೆಯನ್ನು ಕೆಂಪು ವಲಯವನ್ನಾಗಿ ಘೋಷಿಸಲಾಗಿದೆ.